ಬದಿಯಡ್ಕ: 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪೆಡಾಲ ನವಜೀವನ ಶಾಲೆಯ 486 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಉತ್ತಮ ಫಲಿತಾಂಶ ದಾಖಲಿಸುವ ಮೂಲಕ ಕುಂಬಳೆ ಉಪಜಿಲ್ಲೆಯಲ್ಲಿ ಅತಿ ಹೆಚ್ಚು ಎ ಪ್ಲಸ್ ಪಡೆದ ಶಾಲೆಯೆಂಬ ದಾಖಲೆಗೂ ಪಾತ್ರವಾಗಿದೆ.
484 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇಂಗ್ಲಿಷ್ ಮಾಧ್ಯಮದಲ್ಲಿ ನೂರು ಶೇಕಡಾ ಫಲಿತಾಂಶ ದಾಖಲಾಗಿದೆ. 35 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದುಕೊಂಡಿರುತ್ತಾರೆ. 17 ವಿದ್ಯಾರ್ಥಿಗಳು 9 ವಿಷಯಗಳಲ್ಲಿ ಎ ಪ್ಲಸ್ ಪಡೆದುಕೊಂಡಿದ್ದು ಶಾಲೆಗೆ 99.6 ಶೇಕಡ ಫಲಿತಾಂಶ ದಾಖಲಾಗಿದೆ. ಶಾಲಾ ಆಡಳಿತ ಮಂಡಳಿ, ರಕ್ಷಕ-ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯಿನಿ ಅಧ್ಯಾಪಕವೃಂದ ಅಭಿನಂದನೆ ಸಲ್ಲಿಸಿದ್ದಾರೆ.