ಸಮರಸ ಚಿತ್ರಸುದ್ದಿ: ಬದಿಯಡ್ಕ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ನಡೆಸಿದ ಹಿಂದಿ ಮಾಧ್ಯಮ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಎರಡನೆಯ ರ್ಯಾಂಕ್ ಗಳಿಸಿದ ನವಜೀವನ ವಿದ್ಯಾರ್ಥಿನಿ ಸಾನಿಧ್ಯ ರೈ. ಈಕೆ ದೇವರಗುತ್ತು ನೆಟ್ಟಣಿಗೆ ಶ್ಯಾಮ್ ಪ್ರಸಾದ್ ರೈ ಮತ್ತು ಲಕ್ಷ್ಮಿ ರೈ ದಂಪತಿಗಳ ಪುತ್ರಿ, ಪ್ರಸ್ತುತ ನವಜೀವನ ಸೆಕೆಂಡರಿ ಶಾಲೆಯ 10ನೇ ತರಗತಿಯ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ. ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ, ಅಧ್ಯಾಪಕ ವೃಂದ ಶಾಲಾ ಶಿಕ್ಷಕರ ಸಂಘ ಅಭಿನಂದನೆ ಸಲ್ಲಿಸಿದೆ.