ಮಂಜೇಶ್ವರ: ವರ್ಕಾಡಿ ಬಳಿಯ ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶತರುದ್ರಾಭಿಷೇಕ ಮತ್ತು ಶ್ರೀ ಗಣಪತಿ ದೇವರಿಗೆ 108ಕಾಯಿ ಗಣಹೋಮ ಜೂನ್ 6ರಂದು ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2ರಿಂದ ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಭಾಸ್ಕರ ಕೋಳ್ಯೂರು ಸಂಯೋಜನೆಯಲ್ಲಿ'ಚೂಡಾಮಣಿ-ವೀರಮಣಿ'ಎಂಬ ಯಕ್ಷಗಾನ ಪ್ರದರ್ಶನ ಜರುಗಲಿರುವುದಾಗಿ ಪ್ರಕಟಣೆ ತಿಳಿಸಿದೆ.