ನವದೆಹಲಿ :ಇರಾಕ್‍ನಲ್ಲಿ ವ್ಯಾಪಕವಾಗಿ ಹಬ್ಬಿರುವ ಮೂಗುಸ್ರಾವ ಜ್ವರದ ಎರಡು ಪ್ರಕರಣಗಳು ಭಾರತದಲ್ಲೂ ಕಾಣಿಸಿಕೊಂಡಿದ್ದು, 55 ವರ್ಷದ ಮಹಿಳೆಯೊಬ್ಬರು ಜ್ವರದಿಂದ ಮೃತಪಟ್ಟಿದ್ದಾರೆ. ಇರಾಕ್‍ನಲ್ಲಿ ಈ ಜ್ವರದಿಂದ ಈಗಾಗಲೇ 18 ಮಂದಿ ಜೀವ ಕಳೆದುಕೊಂಡಿದ್ದಾರೆ.
ನವದೆಹಲಿ :ಇರಾಕ್‍ನಲ್ಲಿ ವ್ಯಾಪಕವಾಗಿ ಹಬ್ಬಿರುವ ಮೂಗುಸ್ರಾವ ಜ್ವರದ ಎರಡು ಪ್ರಕರಣಗಳು ಭಾರತದಲ್ಲೂ ಕಾಣಿಸಿಕೊಂಡಿದ್ದು, 55 ವರ್ಷದ ಮಹಿಳೆಯೊಬ್ಬರು ಜ್ವರದಿಂದ ಮೃತಪಟ್ಟಿದ್ದಾರೆ. ಇರಾಕ್‍ನಲ್ಲಿ ಈ ಜ್ವರದಿಂದ ಈಗಾಗಲೇ 18 ಮಂದಿ ಜೀವ ಕಳೆದುಕೊಂಡಿದ್ದಾರೆ.
ಅತ್ಯಂತ ಮಾರಕವಾಗಿರುವ ಅಂದರೆ ಸೋಂಕು ತಗುಲಿದ 5 ಮಂದಿಯ ಪೈಕಿ ಇಬ್ಬರು ಮೃತಪಡುತ್ತಿರುವ ಮೂಗುಸ್ರಾವ ಜ್ವರ ಅಥವಾ ಕ್ರಿಮಿನ್-ಕಾಂಗೊ ಹೆಮರಾಜಿಕ್ ಜ್ವರ ವೈರಸ್ (ಸಿಸಿಎಚ್‍ಎಫ್‍ವಿ) ಸಾಂಕ್ರಾಮಿಕವಾಗಿ ಹರಡಿಲ್ಲ. ಒಂದು ಪಕ್ಷ ಸಾಂಕ್ರಾಮಿಕವಾಗಿ ಹರಡಿದರೂ, ಆ ಪರಿಸ್ಥಿತಿ ಎದುರಿಸಲು ಭಾರತ ಸರ್ವ ಸನ್ನದ್ಧವಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ (ಐಸಿಎಂಆರ್-ಎನ್‍ಐವಿ) ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ಪತ್ತೆಯಾಗಿರುವ ಎರಡು ಪ್ರಕರಣಗಳು ಗುಜರಾತ್‍ನ ಭಾವನಗರದಿಂದ ವರದಿಯಾಗಿದೆ ಎಂದು ಎನ್‍ಐವಿ ಮ್ಯಾಕ್ಸಿಮಮ್ ಕಂಟೈನ್‍ಮೆಂಟ್ ಲ್ಯಾಬೊರೇಟರಿಯ ವಿಜ್ಞಾನಿ ಹಾಗೂ ತಂಡದ ಮುಖ್ಯಸ್ಥೆ ಡಾ.ಪ್ರಜ್ಞಾ ಯಾದವ್ ಮಾಹಿತಿ ನೀಡಿದ್ದಾರೆ.
ಈ ವೈರಸ್ ಕಾಯಿಲೆಯಿಂದ 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಈ ಸೋಂಕು ತಗುಲಿದ ರೋಗಿಗಳಲ್ಲಿ ಆಂತರಿಕ ಹಾಗೂ ಮೂಗಿನ ಮೂಲಕ ಬಾಹ್ಯ ಸ್ರಾವ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ.
ಮನೆಯಲ್ಲಿ ಜಾನುವಾರುಗಳ ಪಾಲನೆ ಮಾಡುತ್ತಿರುವ ಗೃಹಿಣಿಯೊಬ್ಬರಿಗೂ ಉಣ್ಣೆ ಹುಳು ಕಡಿದ ಬಳಿಕ ಸೋಂಕು ತಗುಲಿದೆ. ಆ ಬಳಿಕ ಅವರ ಮನೆಯಿಂದ ಮಾದರಿ ಸಂಗ್ರಹಿಸಿದಾಗ ಅವರ ಜಾನುವಾರಿಗೂ ಸೋಂಕು ತಗುಲಿದ್ದು ದೃಢಪಟ್ಟಿತು ಎಂದು ಯಾದವ್ ವಿವರಿಸಿದ್ದಾರೆ. ಕಳೆದ ಮಾರ್ಚ್‍ನಲ್ಲಿ ಭಾರತದಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು, ಕಟ್ಟಡ ಕಾರ್ಮಿಕನೊಬ್ಬನಿಗೆ ಸೋಂಕು ತಗುಲಿತ್ತು. ಆದರೆ ಈತ ಬಳಿಕ ಚೇತರಿಸಿಕೊಂಡಿದ್ದ. ಈತ ಕೂಡಾ ಮನೆಯಲ್ಲಿ ಜಾನುವಾರು ಸಾಕುತ್ತಿದ್ದ ಎಂದು ತಿಳಿದುಬಂದಿದೆ.
ಆಫ್ರಿಕಾ, ಬಲ್ಕಾನ್ಸ್ ಮತ್ತು ಮಧ್ಯಪ್ರದೇಶದಲ್ಲಿ ಇದು ವ್ಯಾಪಕವಾಗಿ ಹರಡುತ್ತಿದ್ದು, ಇದರ ತಡೆ ಹಾಗೂ ಚಿಕಿತ್ಸೆ ಅತ್ಯಂತ ಕಷ್ಟಕರ ಎಂದು ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.