ಕುಂಬಳೆ: ಕುಂಬಳೆ ಪಂಚಾಯತಿ ವ್ಯಾಪ್ತಿಯ ಉಜಾರು ವಾರ್ಡಿನಲ್ಲಿ ಶೈಕ್ಷಣಿಕ ವರ್ಷದ ಅಂತಿಮ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲ ವಿಷಯದಲ್ಲಿ ಎ ಪ್ಲಸ್ ಪಡೆದ ವಾರ್ಡಿನ ವಿದ್ಯಾರ್ಥಿನಿಯರಾದ ಕುಮಾರಿ ಬಿಷಾಕ ಆರ್ ಆಳ್ವ (|ಎಸ್ ಎಸ್ ಎಚ್ ಎಸ್ ಶೇಣಿ ಶಾಲೆ), ಹಾಗೂ ಫಾತಿಮತ್ ಮುಸ್ಕೀನ(ಜಿ.ಎಚ್.ಎಸ್.ಎಸ್.ಕುಂಬಳೆ ಶಾಲೆ) ಇವರನ್ನು ಭಾರತೀಯ ಜನತಾ ಪಕ್ಷದ ಉಜಾರು ವಾರ್ಡ್ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಅರಿಕ್ಕಾಡಿ, ಯುವಮೋರ್ಚಾ ಕುಂಬಳೆ ಮಂಡಲ ಕಾರ್ಯದರ್ಶಿ ರಾಜೇಶ್ ಬಂಬ್ರಾಣ, ವಾರ್ಡಿನ ಬಿಜೆಪಿ ಪದಾಧಿಕಾರಿಗಳಾದ ರಾಜೇಶ್ ಕುಮಾರ್, ಬಾಲಕೃಷ್ಣ ಶೆಟ್ಟಿ, ರಾಜೇಶ್ ಶೆಟ್ಟಿ ಉಜಾರು, ಶ್ರೇಯಸ್, ವಜ್ರೇಶ್ವರಿ ಬೀರಂಟಿಕೆರೆ, ಗ್ರಾಮ ಪಂಚಾಯತಿ ಸದಸ್ಯ ಮೋಹನ ಕೆ ಬಂಬ್ರಾಣ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.