ಮಂಜೇಶ್ವರ: ಕುಂಜತ್ತೂರು ಜಿ.ವಿ.ಎಚ್.ಎಸ್.ಎಸ್. ಶಾಲೆಯಲ್ಲಿ ಪರಿಸರ ದಿನಾಚರಣೆಯು ಅರ್ಥಪೂರ್ಣವಾಗಿ ಜರಗಿತು. ಶಾಲಾ ಎಸ.ಪಿ.ಸಿ ತಂಡದಿಂದ ಶಾಲೆಯ ಸುತ್ತಮುತ್ತ ಗಿಡಗಳನ್ನು ನೆಡಲಾಯಿತು. ಶಾಲೆಯ ಶಿಕ್ಷಕ ರಕ್ಷಕ ಸಂಘದ ಮಾಜಿ ಸದಸ್ಯ ಅಬ್ದುಲ್ಲ ಇವರು ವಿದ್ಯಾರ್ಥಿಗಳಿಗೆ ಗಿಡಗಳನ್ನು ಕೊಡುಗೆಯಾಗಿ ನೀಡಿದರು.
ಗ್ರಾ.ಪಂ. ಸದಸ್ಯ ರಾಜೇಶ್ ಶಾಲೆಯ ತರಕಾರಿ ತೋಟಕ್ಕೆ ಬೀಜಗಳನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ. ಜಿ., ಹಿರಿಯ ಶಿಕ್ಷಕಿ ಲಲಿತಾ ಪರಿಸರ ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಶಿಕ್ಷಕಿ ಅಮಿತಾ ವಂದಿಸಿದರು. ಶಾಲಾ ಇಕೋಕ್ಲಬ್ ಸಂಚಾಲಕಿ ಅನಿತಾ ಉಪಸ್ಥಿತರಿದ್ದರು.ಶಿಕ್ಷಕ ದಿವಾಕರ ಬಲ್ಲಾಲ್ ಕಾರ್ಯಕ್ರಮ ನಿರೂಪಿಸಿದರು.