ಬದಿಯಡ್ಕ: ಕಿಳಿಂಗಾರು ಎ.ಎಲ್.ಪಿ ಶಾಲಾ ಪ್ರವೇಶೋತ್ಸವ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ವ್ಯವಸ್ಥಾಪಕ ಕೆ. ಎನ್. ಕೃಷ್ಣ ಭಟ್ ಉದ್ಘಾಟಿಸಿದರು. ಪಿ.ಟಿ.ಎ ಅಧ್ಯಕ್ಷ ಪದ್ಮನಾಭ ರೈ ಬಂಡ್ರಡ್ಕ ಅಧ್ಯಕತೆ ವಹಿಸಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯ ಕೆ.ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ನವಾಗತ ಮಕ್ಕಳನ್ನು ಕಲಿಕಾ ಕಿಟ್, ಸಿಹಿತಿಂಡಿ ನೀಡಿ ಸ್ವಾಗತಿಸಲಾಯಿತು. ಶಾಲಾ ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ, ಸಹನಾ, ಸುನೀತ, ಅನುರಾಧ ಹಾಗೂ ಹೆತ್ತವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಸ್ವಾಗತಿಸಿ,ಮಧುಮತಿ ವಂದಿಸಿದರು.