ಕಾಸರಗೋಡು: ನಗರ ಸಭೆಯ ವತಿಯಿಂದ ಮಚೆರ್ಂಟ್ ಅಸೋಸಿಯೇಷನ್, ಹೋಟೆಲ್ ಅಂಡ್ ರೆಸ್ಟೊರೆಂಟ್, ಬೇಕರಿ, ಹಸಿರು ಕ್ರಿಯಾ ಸೇನೆ, ಮಚೆರ್ಂಟ್ ಯೂತ್ ವಿಂಗ್, ವ್ಯಾಪಾರಿ ಉದ್ಯಮಿ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಳೆಗಾಲಪೂರ್ವ ಸ್ವಚ್ಛತಾ ಕಾರ್ಯ ಕಾಸರಗೋಡು ನಗರಪ್ರದೇಶದಲ್ಲಿ ನಡೆಯಿತು.
ಸ್ವಚ್ಛತಾ ಮಿಷನ್ ನಗರದ ಕಛೇರಿ ಕಾರ್ಮಿಕರು, ನಗರ ಸಭಾ ಕೌನ್ಸಿಲರ್‍ಗಳು, ನಗರ ಸಭಾ ಆರೋಗ್ಯ ವಿಭಾಗ ಮುಂತಾದ ವಿವಿಧ ಸಂಘಗಳ ಶುಚಿತ್ವ ಕಾರ್ಯಾಚರಣೆಯಲ್ಲಿ ಕೈಜೋಡಿಸಿದರು. ಹೊಸ ಬಸ್ ನಿಲ್ದಾಣ ವಠಾರ ಹಾಗೂ ಆಸುಪಾಸು ಶುಚೀಕರಣ ನಡೆಸಲಾಯಿತು. ನಗರಸಭಾ ಅಧ್ಯಕ್ಷ, ವಕೀಲ ವಿ. ಎಂ. ಮುನೀರ್ ಶುಚೀಕರಣ ಕಾರ್ಯ ಉದ್ಘಾಟಿಸಿದರು. ಉಪಾಧ್ಯಕ್ಷೆ ಶಂಸೀದ ಫಿರೋಸ್, ನಗರಸಭೆ ಕಾರ್ಯದರ್ಶಿ ಎಸ್. ಬಿಜು, ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷರು, ನಗರ ಸಭೆ ಎಚ್.ಎಸ್. ಎ.ಪಿ ರಂಜಿತ್, ಆರೋಗ್ಯಾಧಿಕಾರಿಗಳಾದ ಶ್ರೀಜಿತ್, ಅನೀಸ್, ಜೆಎಚ್‍ಐ ಟಿ. ಸುಧೀರ್, ಶಾಲಿನಿ, ರೂಪೇಶ್ ನೇತೃತ್ವ ನೀಡಿದರು.