ಕಾಸರಗೋಡು: ಚೆಮ್ನಾಡ್ ಪಂಚಾಯಿತಿಯ ಚಟ್ಟಂಚಾಲಿನಲ್ಲಿ ನೂತನವಗಿ ನಿರ್ಮಿಸಿರುವ ಉಪಖಜಾನೆ ಕಟ್ಟಡದ ಉದ್ಘಾಟನೆ ಜೂ. 20ರಂದು ಸಂಜೆ 5ಕ್ಕೆ ನಡೆಯಲಿದೆ. ರಾಜ್ಯ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್ ಉದ್ಘಾಟಿಸುವರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಂಸದ.ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಎರಡು ಮಹಡಿ ಹೊಂದಿರುವ ಕಟ್ಟಡವನ್ನು 2.14ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇನ್‍ಕೆಲ್ ಸಂಸ್ಥೆ ಕಟ್ಟಡ ನಿರ್ಮಾಣ ಕಾಮಗಾರಿಯ ಹೊಣೆವಹಿಸಿಕೊಂಡಿತ್ತು.