ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಹೊಳೆ, ತೋಡುಗಳಲ್ಲಿ ನೀರಿನ ಮಟ್ಟ ಏರತೊಡಗಿದೆ. ಸಮುದ್ರದಲ್ಲಿ ಬೃಹತ್ ಅಲೆಗಳು ಏಳುವ ಸಾಧ್ಯತೆಯಿದ್ದು, ಮೀನುಗಾರರು ಹಾಗೂ ಕರಾವಳಿ ಪ್ರದೇಶದ ಜನರು ಜಾಗ್ರತೆ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ತಗ್ಗುಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವೆಡೆ ಸಂಚಾರ ದುಸ್ತರವೆನಿಸಿದೆ. ಮುಳ್ಳೇರಿಯ-ಚೆರ್ಕಳ ಹಾದಿಯಲ್ಲಿ ಶಾಂತಿನಗರದಲ್ಲಿ ಬೃಹತ್ ಮರ ರಸ್ತೆಗೆ ಉರುಳಿ ಕೆಲಹೊತ್ತು ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಅಭಿವೃದ್ಧಿ ಕಾರ್ಯ ನಡೆದುಬರುತ್ತಿರುವ ತಲಪ್ಪಾಡಿ-ಚೆರ್ಕಳ ರಾಷ್ಟ್ರೀಯ ಹೆದ್ದಾರಿ ಹಾಗೂ ಕುಂಬಳೆ-ಮುಳ್ಳೇರಿಯ ರಾಜ್ಯ ಹೆದ್ದಾರಿ ಕಾಂಗಾರಿ ಸಂಪೂರ್ಣ ಅಯೋಮಯವಾಗಿದೆ.
ಕೇರಳದಲ್ಲಿ ಮುಂದಿನ ಐದು ದಿವಸಗಳ ಕಾಲ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ. ಕಾಸರಗೋಡು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿದ್ದು, ಜುಲೈ 3ರ ವರೆಗೆ ಮುಂದುವರಿಯಲಿದೆ.
ಚಿತ್ರ ನಾಹಿತಿ: ಮುಳ್ಳೇರಿಯ-ಚೆರ್ಕಳ ಹಾದಿಯಲ್ಲಿ ಶಾಂತಿನಗರದಲ್ಲಿ ಬೃಹತ್ ಮರ ರಸ್ತೆಗೆ ಉರುಳಿ ನ ಸಂಚಾರಕ್ಕೆ ತಡೆಯುಂಟಾಯಿತು.