ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಗುರುವಾರ ಮಹಾರಾಷ್ಟ್ರದ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಚಿದಂಬರಂ ಅವರು ತಮ್ಮ ತವರು ರಾಜ್ಯ ತಮಿಳುನಾಡಿನಿಂದ ಹೊಸದಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ 41 ವಿಜೇತರಲ್ಲಿ ಚಿದಂಬರಂ ಅವರೂ ಒಬ್ಬರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಚಿದಂಬರಂ ಅವರು, ನಾನು ಹೊಸದಾಗಿ ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದೇನೆ. ಹೀಗಾಗಿ ಮಹಾರಾಷ್ಟ್ರದ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ನನ್ನ ರಾಜೀನಾಮೆಯನ್ನು ಸಭಾಪತಿ ಸಮ್ಮತಿಸಿದ್ದಾರೆ. ರಾಜ್ಯಸಭೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದು, ನನಗೆ ಹೆಮ್ಮೆಯಾಗಿದೆ. ಮಹಾರಾಷ್ಟ್ರದ ಜನತೆಯ ಭವಿಷ್ಯ, ಶಾಂತಿ ಮತ್ತು ಅಭ್ಯುದಯವನ್ನು ಆಶಿಸುತ್ತೇನೆ ಎಂದು ಹೇಳಿದರು.