ಪಾಲಕ್ಕಾಡ್: ಜಿಲ್ಲೆಯ ಮಂಕಾರದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ನಾಯಿ ಕಚ್ಚಿದ್ದು, ಅಗತ್ಯ ಲಸಿಕೆ ತೆಗೆದುಕೊಂಡರೂ ರೇಬೀಸ್ ಸೋಂಕಿಗೆ ಬಲಿಯಾಗಿದ್ದಾರೆ.
ಪಾಲಕ್ಕಾಡ್: ಜಿಲ್ಲೆಯ ಮಂಕಾರದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ನಾಯಿ ಕಚ್ಚಿದ್ದು, ಅಗತ್ಯ ಲಸಿಕೆ ತೆಗೆದುಕೊಂಡರೂ ರೇಬೀಸ್ ಸೋಂಕಿಗೆ ಬಲಿಯಾಗಿದ್ದಾರೆ.
ಮೇ 30 ರಂದು ಶ್ರೀಲಕ್ಷ್ಮಿಗೆ (19) ಬೀದಿ ನಾಯಿ ಕಚ್ಚಿದೆ. ಇದಾದ ನಂತರ ವೈದ್ಯರು ಸೂಚಿಸಿದ ಎಲ್ಲಾ ಅಗತ್ಯ ಲಸಿಕೆಗಳನ್ನು ವಿದ್ಯಾರ್ಥಿನಿ ತೆಗೆದುಕೊಂಡಿದ್ದರಂತೆ.
ನಂತರ ತೀವ್ರ ಜ್ವರ ಕಾಣಿಸಿಕೊಂಡ ಪರಿಣಾಮ ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದರೆ, ನಿನ್ನೆ ಮುಂಜಾನೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ.
ನಾಯಿ ಕಡಿದು 7 ವರ್ಷದ ಬಾಲಕ ಸಾವು: ಇದೇ ರೀತಿಯ ಪ್ರಕರಣವೊಂದು ಕಳೆದ ವರ್ಷ ಕೇರಳದ ಕಾಸರಗೂಡಿನಲ್ಲಿ ನಡೆದಿದ್ದು, 7 ವರ್ಷದ ಬಾಲಕನಿಗೆ ನಾಯಿ ಕಡಿದಿದೆ. ತಕ್ಷಣ ಸರಿಯಾದ ಲಸಿಕೆ ಪಡೆದರೂ ಮೂರು ವಾರಗಳ ನಂತರ ಬಾಲಕ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.