ಬದಿಯಡ್ಕ: ನೀರ್ಚಾಲು ಪೇಟೆಯ ಇಬ್ಬರು ವ್ಯಾಪಾರಿಗಳ ನಡುವೆ ಭಾನುವಾರ ಮಾರಾಮಾರಿ ನಡೆದಿದ್ದು ಓರ್ವ ಆಸ್ಪತ್ರೆಗೆ ಕೈಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೀರ್ಚಾಲು ಮಾನ್ಯ ರಸ್ತೆ ವ್ಯಾಪಾರ ಸಂಕೀರ್ಣದಲ್ಲಿ ಟಿ.ವಿ. ದುರಸ್ಥಿ ಅಂಗಡಿ ನಡೆಸುತ್ತಿರುವ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ಸದಸ್ಯ ಅರವಿಂದ ಭಟ್ ಅವರಿಗೆ ಪಕ್ಕದ ಅಂಗಡಿಯ ವ್ಯಾಪಾರಿಯಾದ ಶಂಕರನಾರಾಯಣ ಶರ್ಮ ಹಳೆಯ ದ್ವೇಶದಿಂದ ಹಲ್ಲೆ ನಡೆಸಿದ್ದು, ಅರವಿಂದ ಭಟ್ ಅವರ ಕೈ ಮೂಳೆ ಮುರಿತಕ್ಕೊಳಗಾಗಿದೆ. ಇವರನ್ನು ಬಳಿಕ ಕಾಸರಗೋಡಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಬದಿಯಡ್ಕ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.