ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಪೂರ್ವ ವಿದ್ಯಾರ್ಥಿ, ಉದ್ಯಮಿ ಮನೀಶ್ ಪಿಲಾಂಕಟ್ಟೆ ಅವರಿಂದ ಹಿರಿಯ ಪ್ರಾಥಮಿಕ ಶಾಲೆಯ ಹೊಸ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ಕಿಟ್ ವಿತರಣೆ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಾಪಕಿ ಜ್ಯೋಸ್ಸ್ನಾ ಕಡಂದೇಲು ವಹಿಸಿದ್ದರು. ಉದ್ಯಮಿ ಮನೀಶ್ ಪಿಲಾಂಕಟ್ಟೆ ಕಲಿಕೋಪಕರಣ ಕಿಟ್ ವಿದ್ಯಾರ್ಥಿಗಳಿಗೆ ವಿತರಿಸಿದರು. ಅಧ್ಯಾಪಕಿ ವಿದ್ಯಾ ಟೀಚರ್, ಹಳೆ ವಿದ್ಯಾರ್ಥಿ ಸಾಬಿತ್ ಪಿಲಾಂಕಟ್ಟೆ ಉಪಸ್ಥಿತರಿದ್ದರು. ನಿರಂಜನ ರೈ ಪೆರಡಾಲ ಸ್ವಾಗತಿಸಿ, ರಾಜೇಶ್ ಮಾಸ್ತರ್ ವಂದಿಸಿದರು.