ನವದೆಹಲಿ: ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆ ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಕಳೆದ 5 ದಿನಗಳಿಂದ ಅಸ್ತವ್ಯಸ್ಥವಾಗಿದ್ದ ರೈಲು ಸಂಚಾರವು ಬುಧವಾರ ಸಹಜ ಸ್ಥಿತಿಗೆ ಮರಳಿದೆ.
ನವದೆಹಲಿ: ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆ ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಕಳೆದ 5 ದಿನಗಳಿಂದ ಅಸ್ತವ್ಯಸ್ಥವಾಗಿದ್ದ ರೈಲು ಸಂಚಾರವು ಬುಧವಾರ ಸಹಜ ಸ್ಥಿತಿಗೆ ಮರಳಿದೆ.
ಅಗ್ನಿಪಥ ಪ್ರತಿಭಟನೆಗಳಿಂದ ರೈಲು ಸಂಚಾರ ಸ್ಥಗಿತಗೊಂಡಿದ್ದ ಕಡೆಗಳ ಪೈಕಿ ಸಾಧ್ಯವಿರುವ ಕಡೆಗಳಲ್ಲಿ ರೈಲು ಸೇವೆ ಪುನರ್ ಆರಂಭಿಸುವಂತೆ ರೈಲ್ವೆ ವಲಯಗಳಿಗೆ ರೈಲ್ವೆ ಮಂಡಳಿ ಸೂಚಿಸಿದೆ.
ಅಗ್ನಿಪಥ ಯೋಜನೆ ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಕಾರರು, ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೆ, ರೈಲ್ವೆ ಇಲಾಖೆಗೆ ಸೇರಿದ ಆಸ್ತಿಗಳನ್ನು ಹಾನಿ ಮಾಡಿದ್ದರು. ಇದರಿಂದ ಪ್ರತಿ ದಿನ ಸರಾಸರಿ 400 ರೈಲುಗಳ ಸಂಚಾರ ರದ್ದಾಗಿತ್ತು.
ಈ ಪ್ರತಿಭಟನೆಯಿಂದಾಗಿ ರೈಲ್ವೆ ಇಲಾಖೆಯ ಎಷ್ಟು ಪ್ರಮಾಣದ ಆಸ್ತಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿಲ್ಲ. ಆದರೆ, ಪೂರ್ವ ಕೇಂದ್ರದ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಬೋಗಿಗಳು ಮತ್ತು 10 ಎಂಜಿನ್‌ಗಳು ಹಾನಿಗೀಡಾಗಿವೆ ಎಂದು ವಕ್ತಾರರು ತಿಳಿಸಿದ್ದಾರೆ.