ಕಾಸರಗೋಡು: ಶಿರಿಬಾಗಿಲು ನೀರಾಳ ಶ್ರೀ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಕಲಶೋತ್ಸವ ಮಂಗಳವಾರ ಆರಂಭಗೊಂಡಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದುಬರುತ್ತಿದೆ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರನ್ನು ಪೂರ್ಣಕುಂಭದೊಂದಿಗೆ ದೈವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ರಾಕ್ಷೋಘ್ನಹೋಮ, ವಾಸ್ತುಬಲಿ, ವಆಸ್ತು ಹೋಮ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮ ಜರುಗಿತು.
ಜೂ. 8ರಂದು ಬೆಳಗ್ಗ 7.49ರಿಂದ 8.46ರ ಮಧ್ಯೆ ಪೀಠಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಗೃಹಪ್ರವೇಶ, ಮುಡಿಪು ಪೂಜೆ, ಸಂಜೆ 7ಕ್ಕೆ ಗುಳಿಗ ದೈವ, ರಾತ್ರಿ 9ಕ್ಕೆ ವರ್ಣಾರಪಂಜುರ್ಲಿ, ಕುಪ್ಪೆಟ್ಟು ಪಂಜುರ್ಲಿ, ಕಲ್ಲುರ್ಟಿ ದೈವಗಳ ಕೋಲ ನಡೆಯುವುದು. 9ರಂದು ಬೆಳಗ್ಗೆ 10ಕ್ಕೆ ಶ್ರೀ ಧಊಮಾವತೀ, ಸಂಜೆ 4ಕ್ಕೆ ಶ್ರೀ ಕೊರತ್ತಿ ದೈವದ ಕೋಲ ನಡೆಯುವುದು.