ಉಪ್ಪಳ: ಬಿಜೆಪಿ ಪೈವಳಿಕೆ ಪಂಚಾಯತಿ ಬಿಜೆಪಿ ಸಮಿತಿ ಸಭೆ ಪೈವಳಿಕೆ ಕಾಯರ್ ಕಟ್ಟೆ ಯಲ್ಲಿ ಜರಗಿತು. ಮೋದಿ ಆಡಳಿತದ 8 ವರ್ಷ ಪೂರ್ತಿಗೊಳಿಸಿದ ಹಿನ್ನಲೆಯಲ್ಲಿ ಮನೆ ಮನೆ ಸಂಪರ್ಕ ಕರಪತ್ರ ಹಿರಿಯ ಕಾರ್ಯಕರ್ತ ಎಂ ಎನ್ ಭಟ್ ಅವರಿಗೆ ನೀಡಿ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಸಮಿತಿ ಸದಸ್ಯ ಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಯೋಜನೆಗಳು ದೇಶದ ಗ್ರಾಮ ಗ್ರಾಮ ಗಳಲ್ಲಿ ಮನೆಗಳನ್ನು ಮಾತ್ರವಲ್ಲ ಜನ ಸಾಮಾನ್ಯನ ಮನವನ್ನು ಮುಟ್ಟಿದೆ ಎಂದು ಹೇಳಿದರು.
ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಪಜ್ವ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ರಾಜ್ಯ ಕೌನ್ಸಿಲ್ ಸದಸ್ಯ ಹರಿಶ್ಚಂದ್ರ, ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ ಕೆ ಕಯ್ಯಾರ್, ಮುಖಂಡರಾದ ನಾರಾಯಣ ನಾಯ್ಕ್, ಪುಷ್ಪ ಲಕ್ಷ್ಮೀ, ಸರೋಜಾ ಬಲ್ಲಾಳ್, ಸದಾಶಿವ ಚೇರಾಲ್, ಕೀರ್ತಿ ಭಟ್, ಶ್ರೀಧರ ಬದಿಯಾರ್, ಚಂದ್ರಹಾಸ ಕಡಂಬಾರ್, ಸುಂದರ, ಜಯಲಕ್ಷ್ಮೀ ಭಟ್ ಹಾಗೂ ಜನಪ್ರತಿನಿಧಿಗಳು, ಬೂತ್ ಮಟ್ಟದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸತ್ಯಶಂಕರ್ ಸ್ವಾಗತಿಸಿ, ಸುಬ್ರಹ್ಮಣ್ಯ ಭಟ್ ವಂದಿಸಿದರು.