HEALTH TIPS

ಜಗತ್ತಿನ 'ವಿಶ್ವಾಸಾರ್ಹ ಪಾಲುದಾರ' ಭಾರತ: ಪ್ರಧಾನಿ ಮೋದಿ

 ಲಖನೌ: ಜಿ-20 ರಾಷ್ಟ್ರಗಳಲ್ಲಿ ಭಾರತವು ಅತಿವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದು, ಇಂದು ಜಗತ್ತು ಹುಡುಕುತ್ತಿರುವ 'ವಿಶ್ವಾಸಾರ್ಹ ಪಾಲುದಾರ' ರಾಷ್ಟ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಉತ್ತರಪ್ರದೇಶದ ಹೂಡಿಕೆದಾರರ ಮೂರನೇ ಶೃಂಗಸಭೆಯಲ್ಲಿ ಮಾತನಾಡಿದ ಅವರು, '₹ 80 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ 1,406 ಯೋಜನೆಗಳನ್ನು ಆರಂಭಿಸಿದ್ದು, ಭಾರತಕ್ಕೆ ದೊಡ್ಡ ಅವಕಾಶಗಳ ಮಹಾಪೂರವೇ ಹರಿದುಬಂದಿದೆ' ಎಂದು ಹೇಳಿದರು.

'ಜಾಗತಿಕ ಚಿಲ್ಲರೆ ಸೂಚ್ಯಂಕದಲ್ಲಿ ಭಾರತವು ಎರಡನೇ ಸ್ಥಾನದಲ್ಲಿದ್ದು, ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ ರಾಷ್ಟ್ರವಾಗಿದೆ. ಇಂದು ಜಗತ್ತು ಭಾರತದ ಸಾಮರ್ಥ್ಯವನ್ನು ನೋಡುತ್ತಿದೆ ಮತ್ತು ಅದರ ಕಾರ್ಯಕ್ಷಮತೆಯನ್ನು ಪ್ರಶಂಸಿಸುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ 30 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸರಕುಗಳನ್ನು ರಫ್ತು ಮಾಡುವ ಮೂಲಕ ದೇಶವು ದಾಖಲೆ ನಿರ್ಮಿಸಿದೆ. ಬಿಜೆಪಿ ನೇತೃತ್ವದ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ 8 ವರ್ಷಗಳಲ್ಲಿ ಸುಧಾರಣೆ-ಕಾರ್ಯನಿರ್ವಹಿಸುವಿಕೆ-ಪರಿವರ್ತನೆ ಎಂಬ ಮಂತ್ರದೊಂದಿಗೆ ಮುನ್ನಡೆದಿದೆ. ನೀತಿ ಸ್ಥಿರತೆ, ಸಮನ್ವಯ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಒತ್ತು ನೀಡಲಾಗಿದೆ' ಎಂದೂ ಮೋದಿ ವಿವರಿಸಿದರು.

ಕೇಂದ್ರ ಮತ್ತು ಉತ್ತರಪ್ರದೇಶದಲ್ಲಿ ಬಿಜೆಪಿ ಆಡಳಿತವಿರುವ ಕುರಿತು ಉಲ್ಲೇಖಿಸಿದ ಮೋದಿ, 'ಡಬಲ್ ಎಂಜಿನ್ ಸರ್ಕಾರ'ವು ರಾಜ್ಯದ ತ್ವರಿತ ಅಭಿವೃದ್ಧಿಗಾಗಿ ಮೂಲಸೌಕರ್ಯಕ್ಕಾಗಿ ಕೆಲಸ ಮಾಡುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ₹7.50 ಲಕ್ಷ ಕೋಟಿ ಅಭೂತಪೂರ್ವ ಬಂಡವಾಳ ವೆಚ್ಚವನ್ನು ಹಂಚಿಕೆ ಮಾಡಲಾಗಿದೆ. ಉತ್ತಮ ಕಾನೂನು ಮತ್ತು ಸುವ್ಯವಸ್ಥೆಯು ಉತ್ತರಪ್ರದೇಶದಲ್ಲಿ ವ್ಯಾಪಾರ ಸಮುದಾಯದ ವಿಶ್ವಾಸವನ್ನು ಪುನರ್ ಸ್ಥಾಪಿಸಿದೆ. ಕೈಗಾರಿಕೆಗಳಿಗೆ ಸೂಕ್ತ ವಾತಾವರಣವನ್ನೂ ಸೃಷ್ಟಿಸಿದೆ' ಎಂದು ಹೇಳಿದರು.

ಸಂಸದರಾಗಿ ಲೋಕಸಭೆಯಲ್ಲಿ ತಾವು ಪ್ರತಿನಿಧಿಸುತ್ತಿರುವ ಕಾಶಿಗೆ (ವಾರಾಣಸಿ) ಭೇಟಿ ನೀಡುವಂತೆ ಮೋದಿ ಅವರು ಕೈಗಾರಿಕೋದ್ಯಮಿಗಳನ್ನು ಕೋರಿದರು.

ಶೃಂಗಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ದೇಶಕ್ಕೆ ಪ್ರಬಲ ಪ್ರತಿಪಕ್ಷ ಬೇಕು: ಮೋದಿ

ಲಖನೌ: 'ದೇಶಕ್ಕೆ ಪ್ರಬಲ ಪ್ರತಿಪಕ್ಷ ಬೇಕಾಗಿದೆ. ಅದಕ್ಕಾಗಿ ವಂಶಾಡಳಿತದ ರಾಜಕಾರಣವನ್ನು ದೂರವಿಡುವುದು ಅತ್ಯಗತ್ಯ. ಆಗ ಮಾತ್ರ ಪ್ರಜಾಪ್ರಭುತ್ವವು ಬಲಗೊಳ್ಳುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಹುಟ್ಟೂರು ಉತ್ತರಪ್ರದೇಶದ ಕಾನ್ಪುರ ಗ್ರಾಮಾಂತರ ಜಿಲ್ಲೆಯ ಪರೌಂಕ್ ಗ್ರಾಮದಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ವಂಶಾಡಳಿತದ ರಾಜಕಾರಣವನ್ನು ಮಾತನಾಡುವಾಗ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಗುರಿಯಾಗಿಸಿಕೊಂಡಿದ್ದೇನೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ನನ್ನನ್ನು ಅಪಾರ್ಥ ಮಾಡಿಕೊಳ್ಳಬೇಡಿ. ನಾನು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ವಿರೋಧಿಯಲ್ಲ. ಅದರಲ್ಲಿ ವೈಯಕ್ತಿಕವಾಗಿ ಏನೂ ಇಲ್ಲ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries