ಕಾಸರಗೋಡು: ನಗರಸಭಾ ವ್ಯಾಪ್ತಿಂಯ ವಿವಿಧೆಡೆ ನಡೆಸಿದ ದಾಳಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬಳಸಿ ಬಿಸಾಡುವ ವಸ್ತುಗಳಾದ ಪ್ಲಾಸ್ಟಿಕ್ ಕಪ್, ಥರ್ಮಾಕೋಲ್ ಪ್ಲೇಟ್, ಪ್ಲಾಸ್ಟಿಕ್ ಸ್ಟ್ರಾ, ಪ್ಲಾಸ್ಟಿಕ್ ಬಾಳೆ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಂದು ಕ್ವಿಂಟಾಲ್ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ವ್ಯಾಪಾರ ನಿಯಂತ್ರಿಸಲು ವ್ಯಾಪಕ ತಪಾಸಣೆ ನಡೆಯುತ್ತಿದೆ. ದಂಡ ವಿಧಿಸುವುದು ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸಾಮಗ್ರಿ ಖರೀದಿಸಲು ಪೂರ್ಣಾವಧಿ ಬಟ್ಟೆ ಚೀಲಗಳನ್ನು ಇಟ್ಟುಕೊಳ್ಳಬೇಕು ಎಂದು ನಗರಸಭೆ ಕಾರ್ಯದರ್ಶಿ ಎಸ್.ಬಿಜು ತಿಳಿಸಿದರು. ನಗರಸಭೆಯ ಆರೋಗ್ಯ ಮೇಲ್ವಿಚಾರಕ ರಂಜಿತ್‍ಕುಮಾರ್, ಆರೋಗ್ಯ ನಿರೀಕ್ಷಕರಾದ ಶ್ರೀಜಿತ್ ಮತ್ತು ಅನೀಸ್ ಹಾಗೂ ಜೆಎಚ್‍ಐ ಗಳಾದ ಕೆ.ಮಧು, ಶಾಲಿನಿ, ರೂಪೇಶ್ ತಪಾಸಣೆಯ ನೇತೃತ್ವ ವಹಿಸಿದ್ದರು.