ಕಾಸರಗೋಡು: ರಾಜ್ಯದಲ್ಲಿ ವಿದ್ಯತ್ ದರ ಏಕಾಏಕಿ ಎಚ್ಚಳಗೊಳಿಸುವ ಮೂಲಕ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಜನತೆಗೆ ದ್ರೋಹ ಎಸಗಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ ಶ್ರೀಕಾಂತ್ ತಿಳಿಸಿದ್ದಾರೆ.
ವಿದ್ಯುತ್ ಶುಲ್ಕ ಹೆಚ್ಚಳ ವಿರೋಧಿಸಿ ಬಿಜೆಪಿ ಉದುಮ ಪಂಚಾಯತ್ ಸಮಿತಿ ವತಿಯಿಂದ ತೃಕ್ಕನ್ನಾಡಿನಲ್ಲಿ ಆಯೋಜಿಸಲಾಗಿದ್ದ ಪಂಜಿನ ಮೆರವಣಿಗೆ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು. ಎಡರಂಗ ಸರ್ಕಾರದ ದುರಾಡಳಿತದಿಂದ ಜನತೆ ಎಲ್ಲ ರಂಗಗಳಲ್ಲೂ ಸಂಕಷ್ಟ ಎದುರಿಸುವಂತಾಗಿದೆ. ವಿದ್ಯುತ್ ವಲಯವನ್ನೂ ಇದು ಬಾಧಿಸಿದೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಬೆಲೆಯೇರಿಕೆ ತಡೆಗಟ್ಟುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಎಡಪಕ್ಷದ ಆಡಳಿತದಲ್ಲಿ ಬಡಜನತೆ ಪರದಾಡುವ ಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.. ಉದುಮ ಪಂಚಾಯಿತಿ ಸಮಿತಿ ಅಧ್ಯಕ್ಷ ವಿನಾಯಕ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ವೈ.ಕೃಷ್ಣದಾಸ್ ಹಾಗೂ ಒಬಿಸಿ ಮೋರ್ಚಾ ಕ್ಷೇತ್ರದ ಅಧ್ಯಕ್ಷ ಪ್ರದೀಪ್ ಎಂ.ಕೂಟಕಣಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮಧುಸೂದನ ಅಡ್ಕತ್ತಬೈಲ್ ಸ್ವಾಗತಿಸಿದರು. ಮಂಡಲ ಸೆಲ್ ಸಂಚಾಲಕ ವಿನಯನ್ ಕೊಟ್ಟಿಕುಳಂ ವಂದಿಸಿದರು. ಪಂಚಾಯಿತಿ ಸಮಿತಿ ಸದಸ್ಯರಾದ ಶೈನಿ ಮೋಲ್ ಮತ್ತು ನಿತೇಶ್ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿದ್ದರು.