ಸಮರಸ ಚಿತ್ರಸುದ್ದಿ: ಕಾಸರಗೋಡು: ಅಗ್ನಿಪಥ್ ನೇಮಕಾತಿ ಹಿಂಪಡೆಯಬೇಕು, ಸಂಸದ ರಾಹುಲ್ ಗಾಂಧಿ ಅವರ ಕಚೇರಿ ಮೇಲೆ ದಾಳಿ ನಡೆಸಿದ ಎಸ್‍ಎಫ್‍ಐ ಗೂಂಡಾಗಳನ್ನು ಬಂಧಿಸಬೇಕು, ರಾಜ್ಯದಲ್ಲಿ ಆಡಳಿತ ಭಯೋತ್ಪಾದಕತೆಗೆ ಕಡಿವಾಣ ಹಾಕಬೇಕು ಮುಂತಾದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನಾ ಸಂಗಮವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿ ಮಾತನಾಡಿದರು. ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್, ಕೆ.ಪಿ ಉಣ್ಣಿಕೃಷ್ಣನ್ ಮುಂತಾದವರು ಉಪಸ್ಥಿತರಿದ್ದರು.