ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯ 2022-23ನೇ ಆರ್ಥಿಕ ವರ್ಷದ ಯೋಜನೆಗೊಳಪಡಿಸಿ ಕೃಷಿಕರಿಗೆ ಸುಣ್ಣ ಮತ್ತು ಮೈಲುತುತ್ತು ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ತಿಳಿಸಿದ್ದಾರೆ. ಆರ್ಹ ಕೃಷಿಕರು ಅರ್ಜಿ ನಮೂನೆಯೊಂದಿಗೆ ಭೂ ತೆರಿಗೆ ರಶೀದಿ, ಕಟ್ಟಡ ತೆರಿಗೆ ರಶೀದಿ,ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಪ್ರತಿಗಳನ್ನು ಎಣ್ಮಕಜೆ ಕೃಷಿ ಭವನಕ್ಕೆ ಸಲ್ಲಿಸಲು ಕೋರಲಾಗಿದೆ. ಜೂ.18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.