HEALTH TIPS

ಸಾಂಸ್ಕøತಿಕ ತಳಹದಿಯ ಕನಸುಗಳನ್ನು ಬಿತ್ತುವ ಪ್ರಕ್ರಿಯೆಗಳು ಬಲಗೊಳ್ಳಬೇಕು: ಡಾ.ಸಿ.ಸೋಮಶೇಖರ್: ಇಡಿಯಡ್ಕದಲ್ಲಿ ಗಡಿನಾಡ ಸಾಂಸ್ಕøತಿಕ ಉತ್ಸವದಲ್ಲಿ ಅಭಿಮತ

                ಪೆರ್ಲ: ಸಂಸ್ಕøತಿ ಹಾಗೂ ಬದುಕು ಜೀವನ ನಾಣ್ಯದ ಎರಡು ಮುಖಗಳು. ಆದರೆ ಸಂಸ್ಕøತಿ ಉಳಿದರೆ ಮಾತ್ರ ಬದುಕು ಉಳಿಯಲು ಸಾಧ್ಯ. ಗಡಿನಾಡು ಕಾಸರಗೋಡಿನ ಸಮೃದ್ದ ಕನ್ನಡ ಸ|ಂಸ್ಕøತಿ ಉಳಿಸಿ ಬೆಳೆಸಬೇಕಾದ ಯುವ ಜನರನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ಬಹುಮುಖಿ ಚಿಂತನೆಗಳ, ಮಣ್ಣಿನ ಸಾಂಸ್ಕøತಿಕ ತಳಹದಿಯ ಕನಸುಗಳನ್ನು ಬಿತ್ತುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯಬೇಕು ಎಂದು ಕರ್ನಾಟಕ ಸರ್ಕಾರದ ಕರ್ನಾಟಕ ಗಡಿ ಪ್ರದೇಶ| ಅ|ಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದರು.

                           ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವದ ಸವಿನೆನಪಿಗಾಗಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಶ್ರಯದಲ್ಲಿ ಕಾಸರಗೋಡಿನ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ ಪೆರ್ಲ ಸಮೀಪದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗಡಿನಾಡ ಸಾಂಸ್ಕøತಿಕ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   


              ಕರ್ನಾಟಕ  ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದಿಂದ ಗಡಿನಾಡ ಕನ್ನಡ ಹೋರಾಟಗಾರ, ಕವಿ ಕಯ್ಯಾರ ಹೆಸರಲ್ಲಿ ಪ್ರಶಸ್ತಿ ನೀಡುವ ಹೊಸ ಯೋಜನೆ ಆರಂಭಿಸಲಾಗಿದೆ. ಜೊತೆಗೆ ಕಯ್ಯಾರರ ಸವಿ ನೆನಪಿಗಾಗಿ ಕಾಸರಗ|ಓಡಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಒ|ಂದು ಕೋಟಿಯ ಬೃಹತ್ ಮೊತ್ತವನ್ನು ಪ್ರಾ|ಧಿಕಾರ ಬಿಡುಗಡೆಗೊಳಿಸಿದ್ದು, ಅನುಯೋಜ್ಯ ಸ್ಥಳಾವಕಾಶ ದೊರತಲ್ಲಿ ಕೇರಳ ಸರ್ಕಾರದ ಎಲ್ಲಾ ಸಹಕಾರದೊಂದಿಗೆ ಕನ್ನಡ ಭವನ ನಿರ್ಮಾಣ ಶೀಘ್ರ ಸಾಕಾರಗೊ|ಳ್ಳಲಿದೆ ಎಂದು ಡಾ.ಸಿ.ಸೋಮಶ|ಏಖರ್ ಈ ಸಂದರ್ಭ ತಿಳಿಸಿದರು. ಭಾವನಾತ್ಮಕವಾಗಿ ಕನ್ನಡದ ಕರುಳ ಸಂಬಂಧವಿರಿಸಿಕೊಂಡಿರುವ ಕಾಸರಗೋಡಿನ ಕನ್ನಡಿಗರ ಸಮಗ್ರ ಅಭಿವೃದ್ದಿ, ಸಾಹಿತ್ತಿಕ, ಸಾಂಸ್ಕøತಿಕ ಉನ್ನತಿಗೆ ಅಭಿವೃದ್ದಿ ಪ್ರಾಧಿಕಾರ ಸದಾ ಉತ್ಸುಕವಾಗಿ ಕಾರ್ಯೋನ್ಮುಖವಾಗಿದೆ ಎಂದವರು ಭರವಸೆ ನೀಡಿದರು.

              ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಸಾಧಕ ಮಹಾಲಿಂಗ ನಾಯ್ಕ ಅಮೈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಾಸರಗೋಡಿನ ಗ್ರಾಮ-ಗ್ರಾಮಗಳೊಳಗೆ ಇನ್ನೂ ಜೀವಂತವಾಗಿರುವ ಕನ್ನಡ-ತುಳು ಸಾಂಸ್ಕøತಿಕ, ಜಾನಪದೀಯ ಮೂಲಸೆಲೆಯನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಗಡಿ ಉತ್ಸವಗಳು ಪರಿಣಾಮಕಾರಿ. ಉದ್ಯೋಗ, ವೈದ್ಯಕೀಯ ಸಹಿತ ಮೂಲ ಸೌಕರ್ಯಗಳ ಇಂದಿನ ಸವಾಲುಗಳ ಮಧ್ಯೆ ನವ ತರುಣರನ್ನು ಸಾಂಸ್ಕøತಿಕ ತಳಹದಿಯಲ್ಲಿ ಕರೆದೊಯ್ಯುವುದು ನಿಜವಾಗಿಯೂ ಹೋರಾಟವಾಗಿದ್ದು, ಪ್ರಜ್ಞಾವಂತ ನಾಗರಿಕರ ಸಾಮೂಹಿಕ ಯತ್ನಗಳು ಸ್ತುತ್ಯರ್ಹವಾದುದು ಎಂದರು.


             ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್ ಸೋಮಶೇಖರ್, ಸದಸ್ಯೆ ಇಂದಿರಾ ನಾಯ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಂಜುನಾಥ್ ಎಜ್ಯುಕೇಶನ್ ಟ್ರಸ್ಟ್ ನ ಕೆ.ಪಿ. ಮಂಜುನಾಥ್ ಸಾಗರ್, ಸಂಘಟಕ ಗೋ.ನಾ.ಸ್ವಾಮಿ, ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು. ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಸ್ವಾಗತ ಸಮಿತಿ ಸ|ಂಚಾಲಕ ಸುಭಾಷ್ ಪೆರ್ಲ ವಂದಿಸಿದರು. ನಳಿನಿ ಟೀಚರ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. 

                 ಬಳಿಕ  ಮಧ್ಯಾಹ್ನ  ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಬಳಿಕ ಕವಿ ಸಮ್ಮಿಲನ ಕಾರ್ಯಕ್ರಮದಲ್ಲಿ ವಿಜಯ ಕಾನ ಅ|ಧ್ಯಕ್ಷತೆ ವಹಿಸಿದ್ದರು. ನಾಡಿನ ಯುವ ಕವಿಗಳು ಕವನಗಳನ್ನು ವಾಚಿಸಿದರು.

         ಬಳಿಕ ನಡೆದ ವಿಚಾರ ಸಂಕಿರಣದಲ್ಲಿ  ನಿವೃತ್ತ ಮುಖ್ಯ ಶಿಕ್ಷಕ ಶಂಕರ್ ಸಾರಡ್ಕ ಅಧ್ಯಕ್ಷತೆ ವಹಿಸಿದ್ದರು.  ವಿವಿಧ ವಿಷಯಗಳ ಕುರಿತು ನಾಲಂದ ಕಾಲೇಜು ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಶೇಣಿ, ಸಿಬಿಐ ಬೆಂಗಳೂರಿನ ಪಬ್ಲಿಕ್ ಪೆÇ್ರೀಸಿಕ್ಯೂಟರ್ ಶಿವಾನಂದ ಪೆರ್ಲ, ರಾಜಾ ರಾಂ ಎಸ್. ಪೆರ್ಲ, ಶಿಕ್ಷಕ ಅಶ್ರಫ್ ಮತ್ರ್ಯ ವಿಷಯ ಮಂಡಿಸಿದರು.   ಈ ಸಂದರ್ಭ ರಂಗಕರ್ಮಿ ಕಿರಣ್ ಕಲಾಂಜಲಿ ಅ|ಭಿನಯಿಸಿದ ಏಕವ್ಯಕ್ತಿ ನಾಟಕ ಸತ್ಯದರ್ಶನ ಪ್ರಸ್ತುತಿಗೊಂಡಿತು. ಬಳಿಕ ಯಕ್ಷಾಂತರಂಗ ಪೆರ್ಲ ತಂಡದವರಿಂದ ಸುಂದೋಪಸುಂದ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು.  ಸಂಜೆ  ಸಮಾರೋಪ ಸಮಾರಂಭ ನಡೆಯಿತು. ಗಡಿ ಪ್ರದೇಶದ ಸಾಧಕರಾದ ಸದಾನಂದ ಶೆಟ್ಟಿ ಕುದ್ವ, ಸಬ್ಬಣಕೋಡಿ ರಾಮ ಭಟ್, ಹರೀಶ್ ಪೆರ್ಲ, ಆಯಿಷಾ ಪೆರ್ಲ, ಪಿ.ಪದ್ಮನಾಭ ನಾಯಕ್ ಅವರನ್ನು ಗೌರವಿಸಲಾಯಿತು. ಬಳಿಕ ಶಿವಾಂಜಲಿ ನೃತ್ಯ ಕಲಾಕೇಂದ್ರ ಪೆರ್ಲದ ವಿದುಷಿಃ ಕಾವ್ಯಾ ಭಟ್ ನಿರ್ದೇಶನದಲ್ಲಿ ನೃತ್ಯ ವೈವಿಧ್ಯ ಪ್ರಸ್ತುತಿಗೊಂಡಿತು.   ಬೆಳಗ್ಗೆ 8.30ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, 10ಕ್ಕೆ ಸಾಂಸ್ಕ್ರತಿಕ ಮೆರವಣಿಗೆ ನಡೆಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries