ತಿರುವನಂತಪುರ: ವಿದ್ಯುತ್ ಶುಲ್ಕ ಮಾಹಿತಿ(ಬಿಲ್) ನ್ನು ಕಾಗದದ ಮೂಲಕ ಗ್ರಾಹಕರಿಗೆ ಒದಗಿಸುವ ಕ್ರವನ್ನು ಕೆ.ಎಸ್.ಇ.ಬಿ.ಕೊನೆಗೊಳಿಸಲಿದೆ. ಬದಲಿಗೆ ಮೀಟರ್ ರೀಡಿಂಗ್ ಪಡೆದ ಬಳಿಕ ಮೊತ್ತದ ಮಾಹಿತಿಗಳು ಗ್ರಾಹಕರ ಮೊಬೈಲ್ ಪೋನಿಗೆ ಸಂದೇಶ ಮುಖಾಂತರ ಬರಲಿದೆ. 100 ದಿನಗಳಲ್ಲಿ ಕೆ ಎಸ್ ಇ ಬಿಯ ಎಲ್ಲಾ ವ್ಯವಹಾರಗಳೂ ಡಿಜಿಟಲೀಕರಣಗೊಳಿಸುವ ಭಾಗವಾಗಿ ಇಂತಹ ನೂತನ ಕ್ರಮಗಳು ಬರಲಿವೆ.
ಕೃಷಿ ಸಂಪರ್ಕ, ಬಡತನ ರೇಖೆಗಿಂತ ಕೆಳಗಿನವರಿಗಿರುವ ಸಬ್ಸಿಡಿ ಎಂಬ ವಿಭಾಗಗಳ ಹೊರತುಪಡಿಸಿ ಎಲ್ಲಾ ಗ್ರಾಹಕರಿಗೂ ಆನ್ ಲೈನ್ ಮೂಲಕವೋ, ಮೊಬೈಲ್ ಆಫ್ ಮೂಲಕ ಮಾತ್ರ ಬಿಲ್ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ. 100 ದಿನಗಳ ಬಳಿಕ ಕ್ಯಾಶ್ ಕೌಂಟರ್ ಮೂಲಕ ಬಿಲ್ ಪಾವತಿಸಲು ಶೇ.1 ಕ್ಯಾಸ್ ಹ್ಯಾಂಡಲಿಂಗ್ ಶುಲ್ಕ ಹೇರಬೇಕೆಂಬ ಸೂಚನೆಯೂ ವಿದ್ಯುತ್ ಬೋರ್ಡಿನ ಚಿಂತನೆಯಲ್ಲಿದೆ.
ವಿದ್ಯುತ್ ವಿಭಾಗಕ್ಕೆ ಸಂಬಂಧಿಸಿದ ಅಪೇಕ್ಷೆಗಳನ್ನು ಆನ್ ಲೈನ್ ಮೂಲಕ ನೀಡುವ ಗೃಹ ಬಳಕೆದಾರರಿಗೆ ಅಪೇಕ್ಷಾ ಶುಲ್ಕದಲಲಿ 10 ಶೇ. ಶುಲ್ಕ ಹೆಚ್ಚಳಗೊಳ್ಳುವ ಸಾಧ್ಯತೆಯಿದೆ. ಬಿಪಿಎಲ್ ಕಾರ್ಡ್ ಗ್ರಾಹಕರಿಗೆ ಈ ಹೆಚ್ಚುವರಿ ಶುಲ್ಕ ಇರುವುದಿಲ್ಲ.
ಕನ್ಸ್ಯೂಮರ್ ಸಂಖ್ಯೆಯನ್ನೇ ವರ್ಚುವಲ್ ಅಕೌಂಟ್ ನಂಬ್ರವಾಗಿ ಪರಿಗಣಿಸುವ ಬ್ಯಾಂಕ್ ಗಳು ಹಣ ಕಳಿಸಲಿರುವ ವಿಧಾನ ವ್ಯವಸ್ಥೆಗಳನ್ನೂ ಮಾಡುವುದು. ಈ ವ್ಯವಸ್ಥೆಗಳು ಒಂದು ತಿಂಗಳೊಳಗೆ ಜಾರಿಗೆ ಬರಲಿದೆ.
ಸಂಪೂರ್ಣ ಇ-ಪೇಮೆಂಟ್ ವ್ಯವಸ್ಥೆ ಈ ಆರ್ಥಿಕ ವರ್ಷ ಜಾರಿಗೊಳ್ಳಲಿದೆ. ಆದರೆ ಸಬ್ಸಿಡಿ ಇರುವ ಗ್ರಾಹಕರಿಗೆ ಇದು ಬಾಧಕವಲ್ಲ.
ಮುಂದಿನ ತಿಂಗಳ ಬಿಲ್ಲಿಂಗ್ ನಲ್ಲೇ ಹೊಸ ಬದಲಾವಣೆಗಳ ಜಾರಿ:
ಹೆಚ್ಚಳಗೊಳಿಸಲಾದ ಹೊಸ ಬಿಲ್ ಪಾವತಿ ಮೊತ್ತ ಸಹಿತ ನವೀನ ಯೋಜನೆಗಳು ಮುಂದಿನ ತಿಂಗಳಿಂದಲೇ ಜಾರಿಗೆ ಬರುತ್ತಿದೆ. ಮುಂದಿನ ವರ್ಷ ಮಾ.31ರ ವರೆಗೂ ಭಾನುವಾರ ಜಾರಿಗೆಬಂದ ಹೊಸ ಶುಲ್ಕ ಏರಿಕೆ ಜಾರಿಯಲ್ಲಿರಲಿದೆ.