ಕಾಸರಗೋಡು: ಜಿಲ್ಲಾ ಕ್ರೀಡಾ ಮಂಡಳಿಯು ಪ್ಲಸ್ ಒನ್ ಪ್ರವೇಶಕ್ಕೆ ಕೃಪಾಂಕ ಒದಗಿಸುವ ನಿಟ್ಟಿನಲ್ಲಿ ಮಾ.29 ಮತ್ತು 30ರಂದು ಕಾಞಂಗಾಡ್ ಡಾಲ್ಫಿನ್ ಸ್ವಿಮ್ಮಿಂಗ್ ಅಕಾಡೆಮಿಯಲ್ಲಿ ನಡೆಸಲುದ್ದೇಶಿಸಿರುವ ಈಜು ಪರೀಕ್ಷೆಯನ್ನು ಮುಂದೂಡಲಾಗಿದೆ. ಈಜು ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.