ಪೆರ್ಲ: ಉಕ್ಕಿನಡ್ಕಾಸ್ ಆಯುರ್ವೇದದ ವತಿಯಿಂದ ಪೆರ್ಲದಲ್ಲಿ ಮಹಿಳೆಯರಿಗಾಗಿ ನಡೆಯುತ್ತಿರುವ ಒಂದು ವಾರದ ಉಚಿತ ಯೋಗಶಿಬಿರದಲ್ಲಿ ಊರಿನ ಅನೇಕ ಮಹಿಳೆಯರು ಯೋಗಾಭ್ಯಾಸದ ಪ್ರಯೋಜನ ಪಡೆಯುತ್ತಿದ್ದಾರೆ.
ಇಂದು (ಜೂನ್ 21) ಸಂಜೆ 5 ಗಂಟೆಗೆ ಪೆರ್ಲದ ಭಾರತಿ ಸದನದಲ್ಲಿ ನಳಿನಿ ಸೈಪಂಗಲ್ಲು ಅವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವುದಾಗಿ ಶಿಬಿರವನ್ನು ನಡೆಸುತ್ತಿರುವ ವೈದ್ಯೆ ಡಾ. ಸಪ್ನ ಜೆ. ಉಕ್ಕಿನಡ್ಕ ಹಾಗೂ ಯೋಗ ತಜ್ಞೆ ದಿವ್ಯ ಶರ್ಮ ಪಳ್ಳತ್ತಡ್ಕ ಅವರು ಪತ್ರಿಕೆಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಲಿರುವುದು.