ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ 2022-2023ನೇ ಅಧ್ಯಯನ ವರ್ಷಕ್ಕೆ ಸ್ನಾತಕೋತ್ತರ ಪದವಿ ಕೋರ್ಸ್ ಹಾಗೂ ಪಿ.ಜಿ. ಡಿಪೆÇ್ಲೀಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 18 ರಂದು ಕೊನೆಯ ದಿನಾಂಕವಾಗಿದೆ.
ದೇಶದ 42 ಕೇಂದ್ರೀಯ ವಿಶ್ವ ವಿದ್ಯಾಲಯಗಳಿಗೆ ನ್ಯಾಷನಲ್ ಟೆಸ್ಟಿಂಗ್ ಸಂಸ್ಥೆ (ಎನ್‍ಟಿಎ) ನಡೆಸುವ ಸಾರ್ವಜನಿಕ ಪ್ರವೇಶ ಪರೀಕ್ಷೆ (ಸಿಯುಇಟಿ) ಮೂಲಕ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಕ್ಯಾಂಪಸ್‍ಗೂ ಪ್ರವೇಶ ನಡೆಯಲಿದೆ. ಎನ್‍ಟಿಎ ಯ ವೆಬ್‍ಸೈಟ್ ಸಂಪರ್ಕಿಸಿ ಜೂನ್ 18ರ ರಾತ್ರಿ 11.50 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆ ದಿನಾಂಕ ನಂತರ ತಿಳಿಸಲಾಗುವುದು. ಎರಡು ಗಂಟೆಯ ಪರೀಕ್ಷೆ ನಡೆಯಲಿದೆ. ಜೂನ್ 19ರ ರಾತ್ರಿ 11.50 ರವರೆಗೆ ಶುಲ್ಕ ಪಾವತಿಸಬಹುದಾಗಿದೆ. ದಿನಾಂಕ 20 ರಿಂದ 22 ರವರೆಗೆ ತಿದ್ದುಪಡಿಗಾಗಿ ದಿನಾಂಕ ನಿಗದಿಪಡಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಃಇತಿಗಾಗಿ ಎನ್‍ಟಿಎ ಹೆಲ್ಪ್‍ಲೈನ್ ಸಂಖ್ಯೆ (+91-11-40759000), ಹೆಲ್ಪ್ ಡೆಸ್ಕ್ ಸಂಖ್ಯೆ(011 40759000) ಹಾಗೂ ಇ-ಮೇಲ್(https://cucet.nta.nic.in)ಮೂಲಕ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.