ಸಮರಸ ಚಿತ್ರಸುದ್ದಿ: ಕಾಸರಗೋಡು: ಜಿಲ್ಲೆಯ ಖ್ಯಾತ ಉದ್ಯಮಿ, ಸಮಾಜ ಸೇವಕ ಹಾಗೂ ಕಾಞಂಗಾಡು ಸಂಯುಕ್ತ ಜಮಾಅತ್ ಅಧ್ಯಕ್ಷ ದಿ.ಮೆಟ್ರೋ ಮಹಮ್ಮದ್ ಹಾಜಿ ಅವರ ಎರಡನೇ ಸಂಸ್ಮರಣಾ ಸಮಾರಂಭ ಅಂಗವಾಗಿ ಹೊರತರಲಾದ'ಮೆಟ್ರೋ ಸ್ಮøತಿ'ಸ್ಮರಣ ಸಂಚಿಕೆಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಗುರುವಾರ ಶ್ರೀಮಠದಲ್ಲಿ ಬಿಡುಗಡೆಗೊಳಿಸಿದರು. ಗ್ರಂಥದ ಸಂಪಾದಕ ಸಿ. ಮಹಮ್ಮದ್‍ಕುಞÂ, ಮಹಮ್ಮದಾಲಿ ಕಾಞಂಗಾಡು, ಪ್ರೊ. ಎ.ಶ್ರೀನಾಥ್, ಎ.ಆರ್. ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು.