ಕೋಝಿಕೋಡ್ : ಪೇರಾಂಪ್ರ ವಾಳ್ಯಕೋಟ್ ಸಿಪಿಎಂ ಪಕ್ಷದ ಕಚೇರಿಗೆ ಬೆಂಕಿಯಿರಿಸಿ ನಾಶಗೊಳಿಸಿದ ಘಟನೆ ನಡೆದಿದೆ. ವಾಳ್ಯಕೋಟ್ ಟೌನ್ ಬ್ರಾಂಚ್ ಆಫೀಸ್ ನಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಕಚೇರಿಯಲ್ಲಿನ ಪೀಠೊಪಕರಣ, ಇತರ ಕಡತಗಳು ಬೆಂಕಿಗೆ ಆಹುತಿಯಾಗಿದೆ .ಘಟನೆ ಹಿಂದೆ ಕಾಂಗ್ರೆಸ್ಸ್ ಕಾರ್ಯಕರ್ತರು ಇರುವರೆಂದು ಸಿಪಿಎಂ ಆರೋಪಿಸಿದೆ.
ಬೆಂಕಿ ಗಮನಿಸಿದ ಆ ದಾರಿಯಾಗಿ ಪ್ರಯಾಣಿಸುತ್ತಿದ್ದವರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚಿನ್ನಾಭರಣ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧದ ಪ್ರತಿಭಟನೆಯೊಂದಿಗೆ ಸಿಪಿಎಂ, ಡಿವೈಎಫ್ ಐ ಕಾರ್ಯಕರ್ತರು ತೀವ್ರವಾಗಿ ಹಲ್ಲೆ ನಡೆಸಿದ್ದರು. ವಿಮಾನದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆಯ ಹೆಸರಿನಲ್ಲಿ ಕೆಪಿಸಿಸಿ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆದಿತ್ತು. ಕೋಝಿಕೋಡ್ ಜಿಲ್ಲೆಯಲ್ಲಿಯೂ ಕಳೆದ ದಿನಗಳಲ್ಲಿ ಹಲವು ಬಾರಿ ವ್ಯಾಪಕವಾದ ಅಕ್ರಮಗಳು ನಡೆದಿವೆ. ಇದರ ಮುಂದುವರಿಕೆ ಎಂದು ವಾಳ್ಯಕೋಟ್ ಘಟನೆಯ ಬಗ್ಗೆ ನಿರ್ಣಯಿಸಲಾಗಿದೆ.