ಕಾಸರಗೋಡು: ಇತರ ರಾಜ್ಯಗಳಿಂದ ಕೇರಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಮೀನುಗಾರಿಕೆಯಲ್ಲಿ ತೊಡಗುವ ಬೋಟ್‍ಗಳ ಪ್ರವೇಶ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮೀನುಕಾರ್ಮಿಕರು ಮತ್ತು ಅನುಬಂಧ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ರಚಿಸಲಾಗಿರುವ ವಿಧಾನಸಭಾ ಸಮಿತಿ ಸರ್ಕಾರಕ್ಕೆ ಶಿಫಾರಸುಮಾಡಿದೆ.
ಟ್ರೋಲಿಂಗ್ ನಿಷೇಧ ಜಾರಿಗೊಳ್ಳುವ ಸಂದರ್ಭ ಕಾಸರಗೋಡು ಜಿಲ್ಲೆಯ ಕರಾವಳಿಯಲ್ಲಿ ಇತರ ರಾಜ್ಯಗಳ ದೋಣಿಗಳು ಮೀನುಗಾರಿಕೆ ನಡೆಸುವುದನ್ನು ಕಟ್ಟುನಿಟ್ಟಾಗಿ ತಡೆಯುವುದರೊಂದಿಗೆ ದಂಡ ವಸೂಲಿ ಮಾಡುವಂತೆಯೂ ಸೂಚಿಸಲಾಗಿದೆ.
ಅನಧಿಕೃತ ಮೀನುಗಾರಿಕೆ ತಡೆಗಟ್ಟಲು ಕೀಯೂರು ಫಿಶರೀಸ್ ಠಾಣೆಯಲ್ಲಿ ಮೇರೈನ್ ಎನ್‍ಫೆÇೀರ್ಸ್‍ಮೆಂಟ್ ಸೇರಿದಂತೆ ಅಗತ್ಯ ಸಿಬ್ಬಂದಿ ನೇಂಕಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ, ಶಾಸಕ ಪಿ ಪಿ ಚಿತ್ತರಂಜನ್ ತಿಳಿಸಿದ್ದಾರೆ.
ಸೀಮೆ ಎಣ್ಣೆಯ ಸಬ್ಸಿಡಿ ದರವನ್ನು ಹೆಚ್ಚಿಸಬೇಕು, ಒಂದು ಲೀ. ಸೀಮೆಎಣ್ಣೆಗೆ 122 ರೂಪಾಯಿ ಬೆಲೆ ಹೊರೆಯಾಘುತ್ತಿದ್ದು, ಸೀಮೆಎಣ್ಣೆಯನ್ನು ಸಿವಿಲ್ ಸಪ್ಲೈಸ್‍ನ ಮತ್ಸ್ಯಫೆಡ್ ಮೂಲಕ ನ್ಯಾಯಬೆಲೆಗೆ ವಿತರಿಸುವಂತೆಯೂ ಸರ್ಕಾರಕ್ಕೆ ಶಿಫಾರಸು ಮಾಡುವುದಘಿ ತಿಳಿಸಿದರು. ಕಸಬ ಕಡಪ್ಪುರದ ಮೀನುಗಾರಿಕಾ ಬಂದರಿನ ನವೀಕರಣಕಾರ್ಯ ಶೀಘ್ರ ನಡೆಸುವಂತೆ ಸಮಿತಿ ಸರ್ಕಾರವನ್ನು ಆಗ್ರಹಿಸಿತು. ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಧಾನಸಭಾ ಸಮಿತಿ ಸಿಟ್ಟಿಂಗ್‍ನಲ್ಲಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಎ.ಕೆ ರಮೇಂದ್ರನ್, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ ವಿ ಸತೀಶನ್, ಹಾರ್ಬರ್ ಎಂಜಿನಿಯರಿಂಗ್ ಎಕ್ಸಿಕ್ಯುಟೀವ್ ಇಂಜಿನಿಯರ್ ಮಹಮ್ಮದ್ ಅಶ್ರಫ್, ಟೌನ್ ಪ್ಲಾನರ್ ಲೀಲಿಟಿ ಥಾಮಸ್, ನಗರಸಭಾ ಕಾರ್ಯದರ್ಶಿ ಎಸ್.ಬಿಜು, ಮತ್ಯ್ಸಫೆಡ್ ಅಧಿಕಾರಿ ಕೆ.ಎಚ್.ಶೆರೀಫ್, ಮೀನುಗಾರಿಕೆ ಕಾರ್ಯದರ್ಶಿ ಎಸ್.ಎಸ್.ಎಫ್. ಸಿ. ಆದರ್ಶ್ ಉಪಸ್ಥಿತರಿದ್ದರು.