ಕುಂಬಳೆ: ಕಾವುಗೋಳಿ ಸರ್ಕಾರಿ ಎಲ್‍ಪಿ ಶಾಲೆಯ 2022-23ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಬುಧವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮೊಗ್ರಾಲ್ ಪುತ್ತೂರು ಪಂಚಾಯಿತಿ ಹತ್ತನೇ ವಾರ್ಡು ಸದಸ್ಯ ರಫಿ ಪ್ರವೇಶೋತ್ಸವವನ್ನು ಉದ್ಘಾಟಿಸಿ, ಶಾಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹಾಗೂ ರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಧ್ಯಕ್ಷತೆ ವಹಿಸಿದ್ದರು. ಇವೈಸಿಸಿ ಕ್ಲಬ್ ಕಾರ್ಯದರ್ಶಿ ಜಾಬಿರ್, ರಕ್ತೇಶ್ವರೀ ಕ್ಲಬ್‍ನ ಅಧ್ಯಕ್ಷ ಪ್ರಸನ್ನ ಕುಮಾರ್, ಉಪಾಧ್ಯಕ್ಷ ಸುಜಿತ್ ಶುಭಾಶಂಸನೆಗೈದರು. ರಕ್ತೇಶ್ವರೀ ಕ್ಲಬ್‍ನ ವತಿಯಿಂದ ಶಾಲೆಗೆ ಭಾಷಣಾಪೀಠವನ್ನು ಹಸ್ತಾಂತರಿಸಿ, ನವಾಗತ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಯಿತು. ಶಾಲೆಯ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು. ಇವೈಸಿಸಿ ಕ್ಲಬ್ ಹಾಗೂ ಪಂಚಾಯಿತಿ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು. ಮೊಗ್ರಾಲ್ ಪುತ್ತೂರು ಪಂಚಾಯಿತಿ ಅಧ್ಯಕ್ಷೆ ಸಮೀರಾ ಫೈಝಲ್, ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್, ಮೊಗ್ರಾಲ್ ಪುತ್ತೂರು ಎರಡನೇ ವಾರ್ಡು ಸದಸ್ಯೆ ಸುಲೋಚನಾ ಶಾಲೆಗೆ ಭೇಟಿ ನೀಡಿ ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಲ್ವಿಯಾ ಮೊಂತೆರೋ ಸ್ವಾಗತಿಸಿ, ಅಧ್ಯಾಪಕ ಮೊಯ್ದೀನ್‍ಕುಞÂ ವಂದಿಸಿದರು. ಅಧ್ಯಾಪಕರಾದ ಅಮೃತ್‍ಲಾಲ್, ಧನ್ಯಾ, ವಿನಿತಾ ಕಾರ್ಯಕ್ರಮ ನಿರೂಪಿಸಿದರು.