ಉಪ್ಪಳ: ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಸಮಾರಂಭದ ಸಲುವಾಗಿ ಮಂಗಲ್ಪಾಡಿ ಪಂಚಾಯತಿ ನೀಡಿದ ಗಿಡಗಳನ್ನು ನೆಡಲಾಯಿತು. ಹಾಗೂ ತ್ಯಾಜ್ಯ ವಸ್ತುಗಳನ್ನು ಬಳಸಿ ಜೈವಿಕ ಗೊಬ್ಬರವನ್ನು ಸಿದ್ದಗೊಳಿಸುವ ಪಂಚಾಯತ್ ನೀಡಿದ ರಿಂಗ್ ಕಂಪೆÇೀಸ್ಟ್ ವಿಧಾನವನ್ನು ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್ ಉದ್ಘಾಟಿಸಿದರು. ಪಂಚಾಯತಿ ಸದಸ್ಯ ಶರೀಫ್ ಟಿ ಎಂ,
ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ, ಮಂಜೇಶ್ವರ ಬಿ ಆರ್ ಸಿ ಯ ಬಿ.ಪಿ.ಸಿ ವಿಜಯಕುಮಾರ್ ಪಾವಳ ವಿದ್ಯಾರ್ಥಿಗಳಿಗೆ ಪರಿಸರ ಮಹತ್ವದ ಬಗ್ಗೆ ಮಾಹಿತಿ ತಿಳಿಸಿದರು. ಮುಖ್ಯ ಶಿಕ್ಷಕಿ ಚಿತ್ರಾವತಿ ವೈ ರಾವ್ ಚಿಗುರುಪಾದೆ ರಿಂಗ್ ಕಂಪೆÇೀಸ್ಟ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಶಿಕ್ಷಕಿ ಪುಷ್ಪಲತ ಸೋಂಕಾಲು ಸ್ವಾಗತಿಸಿ, ರೆಹಮತ್ ಯಂ ಕೆ ವಂದಿಸಿದರು. ಶಿಕ್ಷಕ ಸುಹೇಶ್ ನಿರೂಪಿಸಿದರು.