ಮುಂಬೈ: ಬಾಲಿವುಡ್ ತಾರೆಯರಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್ ಬಳಿಕ ಇನ್ನಿಬ್ಬರು ಖ್ಯಾತ ತಾರೆಯರೂ ಸೇರಿಕೊಂಡಿದ್ದಾರೆ.
ಮುಂಬೈ: ಬಾಲಿವುಡ್ ತಾರೆಯರಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್ ಬಳಿಕ ಇನ್ನಿಬ್ಬರು ಖ್ಯಾತ ತಾರೆಯರೂ ಸೇರಿಕೊಂಡಿದ್ದಾರೆ.
ಕರೊನಾ ದೃಢವಾಗಿರುವುದರಿಂದಲೇ ಐಫಾ ಅವಾರ್ಡ್ನಲ್ಲಿ ಕತ್ರಿನಾ ಭಾಗವಹಿಸಿಲ್ಲ.
ಮೇ 25 ರಂದು ನಡೆದ ನಿರ್ಮಾಪಕ ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬ ಪಾರ್ಟಿಯಲ್ಲೇ ಕರೊನಾ ತಗುಲಿರಬಹುದು ಎಂದು ಹೇಳಲಾಗಿದೆ. ಇನ್ನು ಶಾರುಖ್ಗೆ ಕರೊನಾ ತಗುಲಿರುವ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಟ್ವೀಟ್ ಮೂಲಕ ತಿಳಿಸಿದ್ದು, ಈ ರಾಜ್ಯದ ರಾಯಭಾರಿಯಾಗಿರುವ ಶಾರುಖ್ ಅವರು ಶೀಘ್ರ ಗುಣಮುಖರಾಗಲೆಂದು ಅವರು ಪ್ರಾರ್ಥಿಸಿದ್ದಾರೆ.
ಸದ್ಯ ಇಬ್ಬರು ತಾರೆಯರು ಅವರವರ ಮನೆಯಲ್ಲಿ ಪ್ರತ್ಯೇಕ ಕ್ವಾರಂಟೈನ್ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.