ಕುಂಬಳೆ: ಕಾವುಗೋಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಇಪ್ಪತ್ತನಾಲ್ಕು ವರ್ಷಗಳ ಕಾಲ ಪಿಟಿಸಿಎಂ ಆಗಿ ಸೇವೆ ಸಲ್ಲಿಸಿದ್ದ ಸುಂದರಿ ಕೆ. ಅವರು ನಿವೃತ್ತರಾಗಿದ್ದಾರೆ. ಕಾಸರಗೋಡು ಜಿಲ್ಲಾ ರೂರಲ್ ಡೆವಲಪ್ಮೆಂಟ್ ಕಚೇರಿಯಲ್ಲಿ ತಾತ್ಕಾಲಿಕ ಹುದ್ದೆಗೆ ಸೇರ್ಪಡೆಗೊಂಡ ಇವರು 1994 ಅಕ್ಟೋಬರ್ 12ರಂದು ಚಂದ್ರಗಿರಿ ಸರ್ಕಾರಿ ಎಲ್‍ಪಿ ಶಾಲೆಯಲ್ಲಿ ಪಿಟಿಸಿಎಂ ಆಗಿ ಸರ್ಕಾರಿ ಹುದ್ದೆಗೆ ಪ್ರವೇಶಿಸಿದ್ದರು. ಬಳಿಕ 1998 ಜೂನ್ 26ರಂದು ಕಾವುಗೋಳಿ ಸರ್ಕಾರಿ ಎಲ್‍ಪಿ ಶಾಲೆಗೆ ವರ್ಗಾವಣೆಗೊಂಡರು. ಸೇವೆ ಸಂದರ್ಭ ಎಫ್‍ಟಿಸಿಎಂ ಆಗಿ ಹುದ್ದೆ ಭಡ್ತಿ ಲಭಿಸಿದ್ದರೂ ಕೂಡಾ ಅದನ್ನು ಸ್ವೀಕರಿಸದೆ ಪಿಟಿಸಿಎಂ ಆಗಿ ಮುಂದುವರಿದಿದ್ದರು. ಅರೆಕಾಲಿಕ ಸಿಬಂದಿಯಾದರೂ ಕೂಡಾ ಪೂರ್ತಿ ಸಮಯ ದುಡಿದು ತಮ್ಮ ಸೇವೆಯಲ್ಲಿ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಕಾಸರಗೋಡು ನಿವಾಸಿ ಕೆ. ಬಿ. ಕೇಶವ ಅವರ ಪತ್ನಿ.