'ಇಂಡಿಯನ್ ಎಕ್ಸ್‌ಪ್ರೆಸ್' ಲೇಖನದಲ್ಲಿ ತಿವಾರಿ, ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ನೇಮಕಾತಿ ಸುಧಾರಣೆಗಳ ಬಗ್ಗೆ ಒಲವು ತೋರಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಸಭೆ ಸದಸ್ಯ, ಜೈರಾಮ್ ರಮೇಶ್, ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅಗ್ನಿಪಥ ಯೋಜನೆಯ ಕುರಿತು ಲೇಖನ ಬರೆದಿದ್ದಾರೆ. ಕಾಂಗ್ರೆಸ್ ದೇಶದ ಏಕೈಕ ಪ್ರಜಾಸತ್ತಾತ್ಮಕ ಪಕ್ಷವಾಗಿದ್ದು, ಮನೀಶ್ ಅಭಿಪ್ರಾಯ ವೈಯಕ್ತಿಕವಾಗಿದ್ದು, ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ತಿವಾರಿ, ಲೇಖನದ ಟ್ಯಾಗ್ ಲೈನ್ ವೈಯಕ್ತಿಯ ಅಭಿಪ್ರಾಯ ಎಂದು ಹೇಳುತ್ತಿದೆ. ಜೈರಾಮ್ ರಮೇಶ್ ಅದನ್ನು ಕೊನೆಯವರೆಗೂ ಓದುತ್ತಾರೆ ಎಂದು ಬಯಸುತ್ತೇನೆ ಎಂದು ಲೇಖನದ ಸ್ಕ್ರೀನ್ ಶಾಟ್ ಲಗತ್ತಿಸಿದ್ದಾರೆ.
ಈ ಹಿಂದೆಯೂ ಸೇನಾ ನೇಮಕಾತಿ ಅಗ್ನಿಪಥ ಯೋಜನೆಯನ್ನು ತಿವಾರಿ ಬೆಂಬಲಿಸಿದ್ದರು. ದೇಶದ ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಉಪಕ್ರಮವಾಗಬಾರದು. ಇದು ಹೆಚ್ಚು ಅವಶ್ಯಕವಾಗಿರುವ ಸುಧಾರಣೆಯಾಗಿದ್ದು, ಸರಿಯಾದ ದಿಶೆಯಲ್ಲಿದೆ ಎಂದು ಹೇಳಿದ್ದರು.