ನವದೆಹಲಿ: ಕೋವಿಡ್ನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥನಾಗಿರುವ ಬಾಲಕನನ್ನು ಆತನ ತಂದೆಯ ತಂದೆ-ತಾಯಿಗೇ ಒಪ್ಪಿಸುವಂತೆ ಸುಪ್ರೀಂಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
ನವದೆಹಲಿ: ಕೋವಿಡ್ನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥನಾಗಿರುವ ಬಾಲಕನನ್ನು ಆತನ ತಂದೆಯ ತಂದೆ-ತಾಯಿಗೇ ಒಪ್ಪಿಸುವಂತೆ ಸುಪ್ರೀಂಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.
'ಬಾಲಕ ಸದ್ಯ ತನ್ನ ತಾಯಿಯ ಸಂಬಂಧಿ (ಚಿಕ್ಕಮ್ಮ) ಬಳಿ ಇದ್ದಾನೆ.
'ಬಾಲಕ, ರಜಾಕಾಲದಲ್ಲಿ ಅಥವಾ ತನಗೆ ಬಯಸಿದಾಗ ಚಿಕ್ಕಮ್ಮನನ್ನು ಭೇಟಿ ಮಾಡಬಹುದು. ಈ ವ್ಯವಸ್ಥೆ ಆತನ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು' ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.
ಕೋವಿಡ್‌ನ ಎರಡನೇ ಅಲೆ ಸಂದರ್ಭದಲ್ಲಿ 6 ವರ್ಷದ ಬಾಲಕನ ತಂದೆ-ತಾಯಿ ಮೃತಪಟ್ಟಿದ್ದರು. ಬಾಲಕನ ಪಾಲನೆ-ಪೋಷಣೆ ವಿಷಯ ಕೋರ್ಟ್ ಮೆಟ್ಟಿಲೇರಿತ್ತು. ಬಾಲಕನನ್ನು ಚಿಕ್ಕಮ್ಮನ ಸುಪರ್ದಿಗೆ ನೀಡುವಂತೆ ಗುಜರಾತ್ ಹೈಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ಬಾಲಕನ 71 ವರ್ಷದ ಅಜ್ಜ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.