HEALTH TIPS

ಪರಿಸರ ಸೂಚ್ಯಂಕದಲ್ಲಿ ಕೆಳ ಶ್ರೇಣಿ: ಅವೈಜ್ಞಾನಿಕವೆಂದು ತಿರಸ್ಕರಿಸಿದ ಭಾರತ

 ನವದೆಹಲಿ: ಇತ್ತೀಚೆಗಷ್ಟೇ ಪ್ರಕಟಗೊಂಡಿದ್ದ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ-2022 ನ್ನು ಭಾರತ ಸರ್ಕಾರ ತಿರಸ್ಕರಿಸಿದ್ದು ಊಹೆಗಳು ಮತ್ತು ಅವೈಜ್ಞಾನಿಕ ವಿಧಾನಗಳನ್ನು ಆಧರಿಸಿ ವರದಿ ಪ್ರಕಟಗೊಂಡಿದೆ ಎಂದು ಹೇಳಿದೆ. 

ಕೊಲಂಬಿಯಾ ವಿವಿಯ ಅಂತಾರಾಷ್ಟ್ರೀಯ ಭೂ ವಿಜ್ಞಾನ ಮಾಹಿತಿ ಜಾಲದ ಕೇಂದ್ರ ಹಾಗೂ ಯೇಲ್ ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಲಾ ಮತ್ತು ಪಾಲಿಸಿ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಕೆಳ ಶ್ರೇಣಿಯನ್ನು ನೀಡಿತ್ತು.

11 ವಿಭಾಗಗಳಲ್ಲಿ 40 ಕಾರ್ಯಕ್ಷಮತೆ ಸೂಚಕಗಳನ್ನು ಬಳಕೆ ಮಾಡಲಾಗಿದ್ದು, ಹವಾಮಾನ ಬದಲಾವಣೆ ಕಾರ್ಯಕ್ಷಮತೆ, ಪರಿಸರ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಗೆ ಸಂಬಂಧಿಸಿದಂತೆ ದೇಶಗಳಿಗೆ ಶ್ರೇಣಿಯನ್ನು ನೀಡಲಾಗಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಎಪಿಐ-2022 ವರದಿ ಊಹೆಗಳು ಮತ್ತು ಅವೈಜ್ಞಾನಿಕ ವಿಧಾನಗಳನ್ನು ಆಧರಿಸಿ ವರದಿ ಪ್ರಕಟಗೊಂಡಿದೆ ಎಂದು ಪರಿಸರ ಸಚಿವಾಲಯ ಹೇಳಿದೆ. 

ಹವಾಮಾನ ನೀತಿ ಉದ್ದೇಶದಲ್ಲಿ 2050 ರಲ್ಲಿ ಉಊಉ ಹೊರಸೂಸುವಿಕೆಯ ಮಟ್ಟವನ್ನು ಪ್ರಕ್ಷೇಪಿಸಲಾಗಿರುವುದು ಹೊಸ ಸೂಚಕವಾಗಿದೆ. ಆ ನಿರ್ದಿಷ್ಟ ರಾಷ್ಟ್ರಗಳ ದೀರ್ಘಾವಧಿ ಸಮಯ, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಬಳಕೆಯ ಪ್ರಮಾಣ, ಹೆಚ್ಚುವರಿ ಇಂಗಾಲದ ಸಿಂಕ್‌, ಶಕ್ತಿ ದಕ್ಷತೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸುವುದನ್ನು ಬಿಟ್ಟು ಕಳೆದ 10 ವರ್ಷಗಳ ಹೊರಸೂಸುವಿಕೆಯಲ್ಲಿನ ಬದಲಾವಣೆಯ ಸರಾಸರಿ ದರವನ್ನು ಆಧರಿಸಿ ಗಣಿಸಲಾಗಿದೆ ಎಂದು ಭಾರತದ ಪರಿಸರ ಸಚಿವಾಲಯ ಹೇಳಿದೆ. 

ಭಾರತ ಚೆನ್ನಾಗಿ ಕಾರ್ಯಕ್ಷಮತೆ ಹೊಂದಿರುವ ಸೂಚಕಗಳ ಮಹತ್ವವನ್ನೇ ಕಡೆಗಣಿಸಲಾಗಿದೆ. ಈ ರೀತಿ ಮಾಡಿರುವುದಕ್ಕೆ ಯಾವುದೇ ಕಾರಣಗಳನ್ನೂ ನೀಡಲಾಗಿಲ್ಲ ಎಂದು ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries