ಉಪ್ಪಳ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ ಸಂಸ್ಥೆಯಲ್ಲಿ ಪ್ರವೇಶೋತ್ಸವವು ಇತ್ತೀಚೆಗೆ ಸಂಭ್ರಮದಿಂದ ಜರಗಿತು. ಸಮಾರಂಭವನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ಅಬ್ದುಲ್ ರೆಹಮಾನ್ ಉದ್ಘಾಟಿಸಿದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಸಭಾಧ್ಯಕ್ಷತೆ ವಹಿಸಿದ್ದು, ಮಂಗಲ್ಪಾಡಿ ಪಂಚಾಯತಿ ಸದಸ್ಯ ಶರೀಫ್ ಟಿ ಎಂ, ಮಂಗಲ್ಪಾಡಿ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಬಿ ಆರ್ ಸಿ ತರಬೇತುದಾರ ಜೋಯ್, ಆಶಾ ಕಾರ್ಯಕರ್ತೆ ವನಿತಾಕುಮಾರಿ ಮುಳಿಂಜ ಶುಭಾಶಂಸನೆ ಗೈದರು.
ನೂತನವಾಗಿ ರಚಿಸಿದ ಮುಳಿಂಜ ಶಾಲಾ ಲಾಂಛನವನ್ನು ಮಂಗಲ್ಪಾಡಿ ಪಂಚಾಯತಿ ಸದಸ್ಯ ಶರೀಫ್ ಟಿ ಎಂ ಬಿಡುಗಡೆಗೊಳಿಸಿದರು.
ಕೇರಳ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ, ಶಾಲಾ ಶಿಕ್ಷಕ ವೃಂದ ಹಾಗೂ ನಾಡಿನ ವಿದ್ಯಾಪ್ರೇಮಿ ದಾನಿಗಳು ವಿದ್ಯಾರ್ಥಿಗಳಿಗೆ ಕೊಡಮಾಡಿದ ಕೊಡೆ, ಬ್ಯಾಗ್, ಹಾಗೂ ಕಲಿಕಾ ಕಿಟ್ ಅನ್ನು ಗಣ್ಯರ ದಿವ್ಯ ಹಸ್ತದಿಂದ ವಿತರಿಸಲಾಯಿತು.
ಶಾಲಾ ಮುಖ್ಯಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಸ್ವಾಗತಿಸಿ, ಶಿಕ್ಷಕ ರಿಯಾಝ್ ಎಂ ಕೆ ನಿರೂಪಿಸಿ ಶಿಕ್ಷಕಿ ಪುಷ್ಪಲತಾ ಸೋಂಕಾಲ್ ವಂದಿಸಿದರು.