ಕೊಚ್ಚಿ: ಚಿತ್ರನಟಿ ಅಂಬಿಕಾ ರಾವ್ ವಿಧಿವಶರಾಗಿದ್ದಾರೆ. ಸೋಮವಾರ ರಾತ್ರಿ 10.30ಕ್ಕೆ ಸ್ವಗೃಹದಲ್ಲಿ ನಿಧನರಾದರು. ಅಂಬಿಕಾ ಮಲಯಾಳಂ ಚಿತ್ರರಂಗದಲ್ಲಿ ನಟಿಯಾಗಿ ಮತ್ತು ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಅವರನ್ನು ಕೊರೋನಾ ಸೋಂಕಿನಿಂದ ಎರ್ನಾಕುಳಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ನಿನ್ನೆ ರಾತ್ರಿ ಹೃದಯಾಘಾತವಾಗಿತ್ತು.
ಬಾಲಚಂದ್ರ ಮೆನನ್ ನಿರ್ದೇಶನದ ಕೃಷ್ಣ ಗೋಪಾಲಕೃಷ್ಣ ಚಿತ್ರದಲ್ಲಿ ಅಂಬಿಕಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಅವರು ಚಿತ್ರದ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅಂದಿನಿಂದ, ಅವರು ತೊಮ್ಮನ್ ಅಂಡ್ ಸನ್ಸ್, ಸಾಲ್ಟ್ ಅಂಡ್ ಪೆಪ್ಪರ್ ಮತ್ತು ರಾಜಮಾಣಿಕ್ಯಂ ಚಿತ್ರಗಳಿಗೆ ಸಹ-ನಿರ್ದೇಶನ ಮಾಡಿದ್ದಾರೆ. ಅವರು ವೈರಸ್, ಕುಂಬಳಂಗಿ, ರಾತ್ರಿವೀಡ್ ಮತ್ತು ಮೀಶಮಾಧವನ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.
ತ್ರಿಶೂರ್‌ನ ತಿರುವಂಬಾಡಿ ದೇವಸ್ಥಾನದ ಬಳಿಯ ರಾಮೇಶ್ವರ ಭವನದಲ್ಲಿ ಅಂಬಿಕಾ ತಂಗಿದ್ದರು. ಅವರಿಗೆ ರಾಹುಲ್ ಮತ್ತು ಸೋಹನ್ ಎಂಬ ಇಬ್ಬರು ಮಕ್ಕಳಿದ್ದಾರೆ.