ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯ ವಠಾರದಲ್ಲಿ ವಿಶ್ವ ಪರಿಸರ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಚಿನ್ಮಯ ಮಿಷನ್ ಕೇರಳ ರಾಜ್ಯ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮ ದೈನಂದಿನ ಬದುಕಿನಲ್ಲಿ ಪ್ಲಾಸ್ಟಿಕ್ ಸಂಪೂರ್ಣ ಕೈಬಿಟ್ಟು ಮುಂದಿನ ತಲೆಮಾರನ್ನು ಆರೋಗ್ಯಪೂರ್ಣ ಬದುಕಿನತ್ತ ಸಾಗುವಂತಘಲು ಕೈಜೋಡಿಸಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.
ಈ ಸಂದರ್ಭ ಕೇರಳ ಕೇಂದ್ರೀಯ ವಿಶ್ವ ವಇದ್ಯಾಲಯದ ಪ್ರಾಣಿಶಾಸ್ತ್ರ ವೊಭಾಗದ ಸಂಶೋಧನಾ ವಿದ್ಯಾರ್ಥಿಪ್ರಶಾಂತ್ ಬಳ್ಳುಳ್ಳಾಯ ಅವರು ಪರಿಸರ ಸಂರಕ್ಷಣೆ ಪ್ರಾಧಾನ್ಯತೆ ಬಗ್ಗೆ ತರಗತಿ ನಡೆಸುವುದರೊಂದಿಗೆ ವಿದ್ಯಾರ್ಥಿಘಳ ಜತೆಗೆ ಸಂವಾದ ನಡೆಸಿದರು. ಸ್ವಾಮಿ ವಿವಿಕ್ತಾನಂದ ಸರಸ್ವತೀ ಅವರು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿದರು. ವಿದ್ಯಾಲಯದ ವಿವಿಧ ಕ್ಲಬ್‍ಗಳಿಗೆ ಸ್ಪರ್ಧೆ ಏರ್ಪಡಿಸಲಗಿತ್ತು. ಶಾಲಾ ಪ್ರಾಂಶುಪಾಲ ಬಿಜು ಮಡತ್ತಿಲ್, ಮುಖ್ಯ ಶಿಕ್ಷಕಿ ಪೂರ್ಣಿಮ ಎಸ್.ಆರ್, ಸಿಂಧು ಶಶೀಂದ್ರನ್, ಅಕಾಡಮಿಕ್ ಕೋರ್ಡಿನೇಟರ್ ಶೀನ ಕೆ.ಪಿ, ಅಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.