ಮುಂಬೈ: ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರು ರಿಲಾಯನ್ಸ್ ರೀಟೇಲ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದಕ್ಕೂ ಮುನ್ನ ರಿಲಾಯನ್ಸ್ ಇಂಡಸ್ಟ್ರೀಸ್ ನ ಜವಾಬ್ದಾರಿಯನ್ನು ಅಂಬಾನಿ ತಮ್ಮ ಹಿರಿಯ ಪುತ್ರ ಆಕಾಶ್ ಅಂಬಾನಿಗೆ ವಹಿಸಿದ್ದರು.
ಇಶಾ ಈಗ ರಿಲಾಯನ್ಸ್ ರೀಟೇಲ್ ವೆಂಚರ್ಸ್ ನ ನಿರ್ದೇಶಕರಾಗಿದ್ದು, ಬೋರ್ಡ್ ಆಫ್ ರಿಲಾಯನ್ಸ್ ರೀಟೇಲ್ ನಲ್ಲಿ ಇಶಾ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಮುಖೇಶ್ ಅಂಬಾನಿ ತಮ್ಮ ಎಲ್ಲಾ ಉದ್ಯಮಗಳಿಗೂ ಉತ್ತರಾಧಿಕಾರಿಗಳನ್ನು ನೇಮಕ ಮಾಡುವ ಯೋಜನೆ ಹೊಂದಿದ್ದು, ಉಳಿದ ಉದ್ಯಮಗಳಿಗೆ ಇನ್ನೆರಡು ದಿನಗಳಲ್ಲಿ ಹೊಸ ಅಧ್ಯಕ್ಷರ ನೇಮಕ ಘೋಷಣೆಯಾಗುವ ನಿರೀಕ್ಷೆ ಇದೆ.
ಅಂಬಾನಿ ಅವರ ಅವಳಿ ಮಕ್ಕಳು ರಿಲಾಯನ್ಸ್ ರೀಟೇಲ್ ವೆಂಚರ್ಸ್ ಗೆ ಮೆಟಾ ಪ್ಲಾಟ್ಫಾರ್ಮ್ ನೊಂದಿಗಿನ ಹೂಡಿಕೆ ಹಾಗೂ ಜಿಯೋ ಮಾರ್ಟ್ ಗೆ ಸಂಬಂಧಿಸಿದ ಮಾತುಕತೆಯ ತಂಡದಲ್ಲಿ 2014 ರಿಂದ ಇದ್ದರು. 2008 ರಲ್ಲಿ ಇಶಾ ಫೋರ್ಬ್ಸ್ ನಲ್ಲಿ ಕಿರಿಯ ಬಿಲಿಯನೇರ್ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.