ಟೀಕೆಗಳು (Criticism) ಕೇಳಲು ಅಪ್ಯಾಯಮಾನವಾಗಿರುವುದಿಲ್ಲ. ಬೇರೆಯವರಿಂದ ಟೀಕೆ-ಟಿಪ್ಪಣಿಗಳನ್ನು ಕೇಳಿಸಿಕೊಳ್ಳುವುದೆಂದರೆ ಹಿಂಸೆ, ಸಿಟ್ಟು, ಬೇಸರ, ನಮ್ಮನ್ನು ಇನ್ನೊಬ್ಬರು ಹೊಗಳಲಿ ಎಂದು ಬಯಸುತ್ತೇವೆಯೇ ಹೊರತು ತೆಗಳುವುದು ಕಂಡರೆ ಆಗಿಬರುವುದಿಲ್ಲ.
ಹೈದರಾಬಾದ್ ನ ದೃತಿ ಮನೋರೋಗ ಕೇಂದ್ರದ ಮನೋರೋಗ ತಜ್ಞೆ ಡಾ ಪೂರ್ಣಿಮಾ ನಾಗರಾಜ್ ಅವರ ಬಳಿ ಒಂದು ದಿನ ಒಬ್ಬ ರೋಗಿ ಬಂದಿದ್ದರಂತೆ. ಯುವ ಹದಿಹರೆಯದವರು ಕಣ್ಣೀರು ಹಾಕುತ್ತಾ ಬಂದು, “ನಾನು ನಿಷ್ಪ್ರಯೋಜಕ ಎಂದು. ಇನ್ನೊಂದು ಕೇಸಿನಲ್ಲಿ ದಂಪತಿಯ ಥೆರಪಿ ಸಂದರ್ಭದಲ್ಲಿ ಪತಿ, ತನ್ನ ಪತ್ನಿಗೆ ನಾನು ಯಾವುದರಲ್ಲಿಯೂ ಸರಿಯಿಲ್ಲ, ಪ್ರಯೋಜನವಿಲ್ಲ ಎಂದು ಆರೋಪಿಸುತ್ತಿರುತ್ತಾಳೆ ಎಂದರು, ಅದಕ್ಕೆ ಪತ್ನಿ ನನ್ನ ಪತಿಯನ್ನು ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿರುತ್ತೇನೆ ಎನ್ನುತ್ತಾರೆ.
45 ವರ್ಷಗಳಿಂದ ದಂಪತಿಯಾಗಿರುವ ಇಳಿ ವಯಸ್ಸಿನ ದಂಪತಿ ಮನೋವೈದ್ಯೆ ಬಳಿ ಬಂದು, ನನ್ನ ಪತಿ ನನ್ನ ಬಗ್ಗೆ ಯಾವಾಗಲೂ ಬೈಯುತ್ತಾ, ನನ್ನ ಬಗ್ಗೆ ಟೀಕೆ ಮಾಡುತ್ತಾ ಇರುತ್ತಾರೆ, ನನಗೆ ಅವರಿಂದ ಡಿವೋರ್ಸ್ ಬೇಕಾಗಿದೆ ಎನ್ನುತ್ತಾರೆ.
ಈ ಮೇಲಿನ ಎಲ್ಲಾ ವಿಷಯಗಳಲ್ಲಿಯೂ ಎಲ್ಲರ ಸಾಮಾನ್ಯ ಸಮಸ್ಯೆ ಟೀಕೆ. ಜನರ ನಡವಳಿಕೆಯನ್ನು ಸರಿಪಡಿಸುವ, ಮಾರ್ಗದರ್ಶನ ಮಾಡುವ ಮತ್ತು ಬದಲಾಯಿಸುವ ಅಗತ್ಯತೆ, ಒಬ್ಬರು ಸಹಾಯ ಮಾಡುತ್ತಿದ್ದಾರೆ ಮತ್ತು ಸುಧಾರಣೆಗೆ ಅನುಕೂಲವಾಗುತ್ತಾರೆ ಎಂಬ ಕಲ್ಪನೆಯು ವಿಮರ್ಶಕನ ಸಿದ್ಧಾಂತವನ್ನು ನಿಯಂತ್ರಿಸುತ್ತದೆ. ಅನೇಕರು ಇದನ್ನು ರಚನಾತ್ಮಕ ಟೀಕೆ ಎಂದು ಕರೆಯುತ್ತಾರೆ, ಆದರೆ ಒಬ್ಬರು ಇನ್ನೊಬ್ಬರ ಮನಸ್ಸಿಗೆ ಆಘಾತವಾಗುವಂತಹ ಟೀಕೆಗಳನ್ನು ಮಾಡುತ್ತಿದ್ದರೆ ಅದನ್ನು ರಚನಾತ್ಮಕ ಟೀಕೆ ಎಂದು ಕರೆಯಲು ಸಾಧ್ಯವೇ?
ಟೀಕೆಯು ಕೋಪ, ಆತಂಕ, ಖಿನ್ನತೆ, ಸ್ವಾಭಿಮಾನ ಕೊರತೆ, ಕಳಪೆ ಕಾರ್ಯಕ್ಷಮತೆ ಮತ್ತು ಸ್ವಯಂ-ಹಾನಿಯನ್ನು ಉಂಟುಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಜನರು ಏಕೆ ಟೀಕೆ ಮಾಡುತ್ತಾರೆ?
ಅತ್ಯಂತ ಸಾಂಪ್ರದಾಯಿಕ, ಕಟ್ಟುನಿಟ್ಟಾದ ಮತ್ತು ನಿರ್ಣಾಯಕವಾಗಿ ಯೋಚಿಸುವ ಕುಟುಂಬಗಳಲ್ಲಿ ಬೆಳೆದು, ಅಲ್ಲಿ ತಿದ್ದುವಿಕೆ ಹೆಚ್ಚಾಗಿರುತ್ತದೆ. ಇದು ನಿಂದನೆಯ ಚಕ್ರವನ್ನು ಸೃಷ್ಟಿಸುತ್ತದೆ ಮತ್ತು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತದೆ.
ಅನೇಕ ಜನರು ಇತರರನ್ನು ನಿಯಂತ್ರಿಸುವ ಮತ್ತು ಟೀಕಿಸುವ ಮೂಲಕ ತಮ್ಮದೇ ಆದ ಆತಂಕವನ್ನು ನಿಭಾಯಿಸುತ್ತಾರೆ. ಉದಾಹರಣೆಗೆ, ತೂಕ ಮತ್ತು ದೇಹದ ರಚನೆ ಬಗ್ಗೆ ಸಮಸ್ಯೆ ಹೊಂದಿದ್ದ ತಾಯಿ ತನ್ನ ಮಗಳ ಊಟ-ತಿಂಡಿಯ ಅಭ್ಯಾಸದ ಮೇಲೆ ನಿಯಂತ್ರಣ ಹೇರುತ್ತಿದ್ದಳು.
ನಿಯಂತ್ರಣ, ಟೀಕೆಗೆ ಒಳಗಾದವರು ನಿಯಂತ್ರಣದ ನಡವಳಿಕೆ ಮತ್ತು ದಬ್ಬಾಳಿಕೆಯ ಟೀಕೆಗಳನ್ನು ಮಾಡುವ ಗುಣ ಹೊಂದಿರುತ್ತಾರೆ. ಎಂದಿಗೂ ಬೇರೆಯವರಿಂದ ಮೆಚ್ಚುಗೆ ಪಡೆಯದ ಅಥವಾ ಸರಿಯಾಗಿ ನಡೆಸಿಕೊಳ್ಳದ ಅತ್ತೆ, ತನ್ನ ಸೊಸೆಯೊಂದಿಗೆ ಅದೇ ರೀತಿಯಲ್ಲಿ ವರ್ತಿಸಬಹುದು.
ಬಾಲ್ಯದ ಆಘಾತಕಾರಿ ಅನುಭವಗಳು ಪ್ರೌಢಾವಸ್ಥೆಯಲ್ಲಿ ಆತಂಕ, ನಿಯಂತ್ರಣ ಮತ್ತು ನಿರಂತರ ಸೂಕ್ಷ್ಮ ನಿರ್ವಹಣೆಗೆ ಕಾರಣವಾಗಬಹುದು.
ಮನುಷ್ಯನ ಮನಸ್ಸಿನೊಳಗಿನ ಆಂತರಿಕ ಮನೋರೋಗ ಹೊರಗೆ ಕೆಲವರ ಮೇಲೆ ನಿರ್ಣಾಯಕ ನಡವಳಿಕೆಯನ್ನು ಪ್ರದರ್ಶಿಸಬಹುದು, ಭಯ, ಆತಂಕವನ್ನು ಉಂಟುಮಾಡಬಹುದು.
ಕ್ರಮಬದ್ಧತೆ, ಪರಿಪೂರ್ಣತೆ, ಸಮಯಪ್ರಜ್ಞೆ ಮತ್ತು ನಿಯಂತ್ರಣದ ಮನಸ್ಥಿತಿಯನ್ನು ಹೊಂದಿರುವವರ ಜೊತೆ ವಾಸಿಸುತ್ತಿರುವುದು.
ತಮ್ಮ ಜೀವನದಲ್ಲಿ ಅಹಿತಕರ ಘಟನೆ ನಡೆದಿದ್ದರೆ ಅಥವಾ ಬೇರೆಯವರಿಂದ ತುಚ್ಛವಾಗಿ ನಡೆಸಿಕೊಂಡಿದ್ದರೆ ಅದನ್ನು ಬೇರೆಯವರ ಮೇಲೆ ಹೇರುವ ಸಂದರ್ಭ ಬರಬಹುದು.
ತಮ್ಮ ಅಭದ್ರತೆಯಿಂದ ಹೊರಬರಲು ಟೀಕೆಯನ್ನು ಬೇರೆಯವರ ಮೇಲೆ ಹೇರುವುದು ಸಾಮಾನ್ಯವಾಗುತ್ತದೆ.
ಸಮಸ್ಯೆಯಿಂದ ಹೊರಬರುವುದು ಹೇಗೆ?: ನಿಮಗೆ ನಂಬಿಕಸ್ಠರೊಂದಿಗೆ ಮುಕ್ತವಾಗಿ ಚರ್ಚಿಸಿ, ಅವರಲ್ಲಿ ಸಮಸ್ಯೆ ಹೇಳಿಕೊಳ್ಳಿ. ವೃತ್ತಿಪರರ ಸಲಹೆ-ಅಭಿಪ್ರಾಯ ಕೇಳಿ.