ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಹೋರಾಟ ನಡೆಸುತ್ತಿರುವ ದಯಾಭಾಯಿ ಮತ್ತೊಮ್ಮೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಕಾನೂನುಬದ್ಧ ಸವಲತ್ತು ಒದಗಿಸಿಕೊಡಲು ವಿಫಲವಾಗಿರುವ ಸರ್ಕಾರದ ಧೋರಣೆ ಖಂಡಿಸಿ ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಆ. 6ರಿಂದ ಪ್ರತಿಭಟನೆÂ ನಡೆಯಲಿದೆ. ಅನಿರ್ಧಿಷ್ಟಾವಧಿ ಕಾಲ ನಡೆಯುವ ನಿರಾಹಾರ ಸತ್ಯಾಗ್ರಹಕ್ಕೆ ದಯಭಾಯಿ ನೇತೃತ್ವ ನೀಡಲಿದ್ದಾರೆ.
ದಯಾಭಾಯಿ ಅವರು ಮಧ್ಯಪ್ರದೇಶದ ಆದಿವಾಸಿ ಪ್ರದೇಶದಲ್ಲಿ ಅವರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಪ್ರಮುಖ ಸಾಮಾಜಿಕ ಹೋರಾಟಗಾರ್ತಿಯಾಗಿದ್ದು, 2018ರಿಂದ ಕಾಸರಗೋಡಿನ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದ್ದಾರೆ. ಆರೋಗ್ಯ ರಂಗದಲ್ಲಿ ಅತ್ಯಂತ ಹಿಂದುಳಿದಿರುವ ಕಸರಗೋಡು ಜಿಲ್ಲೆಗೆ ಏಮ್ಸ್ ಮಂಜೂರಾತಿಗಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ಸಕ್ರಿಯವಾಗಿರುವ ದಯಭಾಯಿ ಅವರು ಹಿರೋಷಿಮಾ ದಿನಾಚರಣೆಯಾದ ಆ. 6ರಿಂದ ಸೆಕ್ರೆಟೇರಿಯೆಟ್‍ನ ಎದುರು ಎಂಸೋಸಂತ್ರಸ್ತರಿಗಾಗಿ ಉಪವಾಸ ಮುಷ್ಕರ ಹೂಡಲು ಮುಂದಾಗಿದ್ದಾರೆ. ಏಮ್ಸ್ ಮಂಜೂರಾತಿಗಾಗಿ ಕೇಂದ್ರಕ್ಕೆ ರವಾನಿಸಿರುವ ಜಿಲ್ಲೆಗಳ ಪಟ್ಟಿಯಲ್ಲಿ ಕಾಸರಗೋಡನ್ನೂ ಒಳಪಡಿಸಬೇಕು, ಏಮ್ಸ್‍ಗಾಗಿ ಕಾಯದೆ ಎಂಡೋ ಸಂತ್ರಸ್ತರಿಗಾಗಿ ಕಾಸರಗೋಡಿನಲ್ಲೇ ಉನ್ನತ ಚಿಕಿತ್ಸಾ ವ್ಯವಸ್ಥೆ ಏರ್ಪಡಿಸಬೇಕು, ಎಲ್ಲ ಪಂಚಾತಿತಿ, ನಗರಸಭೆಗಳಲ್ಲಿ ಡೇಕೇರ್ ಕೇಂದ್ರಗಳನ್ನು ಸ್ಥಾಪಿಸಬೇಕು, ಎಂಡೋಸಂತ್ರಸ್ತರ ಪತ್ತೆಗಾಗಿ ವಿಶೇಷ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಯಲಿದೆ.
ಸೆಕರೆಟೇರಿಯೆಟ್ ಎದುರು ನಡೆಯಲಿರುವ ನಿರಾಹಾರ ,ಉಷ್ಕರ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಖಾದರ್ ಮಾಙËಡ್, ವಕೀಲ ರಾಜೇಂದ್ರನ್, ಅಂಬಿಕಾಸುತನ್ ಮಾಙËಡ್, ಬಶೀರ್ ಅಹಮ್ಮದ್. ಕೆ.ಜಿ ಸಜಿ, ಎ.ಹಮೀದ್ ಹಾಜಿ ಅವರು ರಕ್ಷಾಧಿಕಾರಿಗಳಾಗಿರುವ ಸಮಿತಿ ರಚಿಸಲಾಯಿತು.