ಕುಂಬಳೆ: ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಮಲೇರಿಯಾ ಜಾಗೃತಿ ಮಾಸಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕುಂಬಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಉರಾಳುಂಗಲ್ ನಿರ್ಮಾಣ ಸಂಸ್ಥೆ ಹಾಗೂ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕುಂಬಳೆ ಪೆರ್ವಾಡ್ ಉರಾಳುಂಗಲ್ ಪ್ರಾಜೆಕ್ಟ್ ಸೈಟ್ ಕಛೇರಿಯಲ್ಲಿ ನಡೆದ ವೈದ್ಯಕೀಯ ಶಿಬಿರವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಉದ್ಘಾಟಿಸಿದರು. ಅತಿಥಿ ಕಾರ್ಮಿಕರಿಗೆ ಮಲೇರಿಯಾ ರಕ್ತ ಪರೀಕ್ಷೆ, ಜೀವನಶೈಲಿ ರೋಗ ನಿಯಂತ್ರಣ ಪರೀಕ್ಷೆ ಹಾಗೂ ಆರೋಗ್ಯ ಜಾಗೃತಿ ತರಗತಿ ನಡೆಸಲಾಯಿತು. ಹಿರಿಯ ಸೈಟ್ ಎಂಜಿನಿಯರ್ ನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಮಲೇರಿಯಾ ಕ್ರಿಯಾ ಯೋಜನೆ ಮಂಡಿಸಿದರು. ನಿರ್ದೇಶಕ ಕೆ.ಟಿ.ರಾಜನ್, ವಿವಿಧ ಪ್ರಭಾರ ಅಧಿಕಾರಿಗಳಾದ ಶೈಲೇಶ್ ಕುಮಾರ್ ಸಿನ್ಹಾ, ಜೈನು, ಶ್ರೀಜಿತ್, ಶಾಹುಲ್ ಹಮೀದ್, ಆರೋಗ್ಯ ನಿರೀಕ್ಷಕ ಗನ್ನಿಮೋಳ್ ಮಾತನಾಡಿದರು. ಯೋಜನಾ ವ್ಯವಸ್ಥಾಪಕ ಅಜಿತ್ ಸ್ವಾಗತಿಸಿ, ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ನಿರೀಕ್ಷಕ ಸಿ.ಸಿ.ಬಾಲಚಂದ್ರನ್ ವಂದಿಸಿದರು.