ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವ ವೇಳೆ ಇಳಿಯಬೇಕಿರುವ ಸ್ಟೇಷನ್ ಎಲ್ಲಿ ಬಂದು ಬಿಡುವುದೋ, ಎಲ್ಲಿ ಸ್ಟೇಷನ್ ಮಿಸ್ ಆಗುವುದೋ ಎಂಬ ಭಯದಲ್ಲಿ ಪ್ರಯಾಣಿಕರು ಇರುವುದು ಸಹಜ. ಅದರಲ್ಲಿಯೂ ಮೊದಲ ಬಾರಿಗೆ ಪ್ರಯಾಣಿಸುತ್ತಿದ್ದರಂತೂ ಈ ಭಯ ಕಾಡುತ್ತಲೇ ಇರುತ್ತದೆ.

ಅಂಥ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ಕೊಟ್ಟಿದೆ ರೈಲ್ವೆ ಇಲಾಖೆ. ದೂರದ ಪ್ರಯಾಣಿಕರಿಗೆ ವೇಕ್ ಅಪ್ ಅಲರ್ಟ್ ಸೌಲಭ್ಯವನ್ನು ರೈಲ್ವೆ ಇಲಾಖೆ ಆರಂಭಿಸಿದೆ. ಮುಂದಿನ ನಿಲ್ದಾಣ ಬರುವ 20 ನಿಮಿಷಗಳ ಮೊದಲು ಪ್ರಯಾಣಿಕರನ್ನು ಅಲಾರಾಮ್ ಎಚ್ಚರಿಸಲಿದೆ. ಇದರಿಂದ ನಿದ್ದೆಯಲ್ಲಿ ಇದ್ದವರೂ ಬೇಗನೇ ಎದ್ದು ನಿಲ್ದಾಣದಲ್ಲಿ ಇಳಿಯಲು ಅನುಕೂಲ ಮಾಡಿಕೊಳ್ಳಬಹುದು.
'ಡೆಸ್ಟಿನೇಶನ್ ಅಲರ್ಟ್ ವೇಕಪ್ ಅಲಾರ್ಮ್' ಸೌಲಭ್ಯ ಇದಾಗಿದೆ. ಸದ್ಯ ಈ ಸೌಲಭ್ಯವನ್ನು ರಾತ್ರಿ 11 ರಿಂದ ಬೆಳಿಗ್ಗೆ 7 ರವರೆಗೆ ಪಡೆಯಬಹುದು.
ಪ್ರಯಾಣಿಕರು ಏನು ಮಾಡಬೇಕು?
ಇದಕ್ಕಾಗಿ ಪ್ರಯಾಣಿಕರು, ಮೊಬೈಲ್ ಸಂಖ್ಯೆ 139 ಗೆ ಕರೆ ಮಾಡಬೇಕಾಗುತ್ತದೆ ಅಥವಾ ಸಂದೇಶವನ್ನು ಕಳುಹಿಸಬೇಕಾಗುತ್ತದೆ. ಮೊದಲು ನಿಮ್ಮ ಭಾಷೆಯನ್ನು ಆಯ್ಕೆ ಮಾಡಬೇಕು. ಅದರ ನಂತರ, ಪ್ರಯಾಣಿಕರಿಂದ 10-ಅಂಕಿಯ ಪಿಎನ್‌ಆರ್ ಸಂಖ್ಯೆಯನ್ನು ಕೇಳಲಾಗುತ್ತದೆ. ಅದನ್ನು ನೀವು ಕಳುಹಿಸಬೇಕು. ಖಚಿತಪಡಿಸಲು 1 ಅನ್ನು ಡಯಲ್ ಮಾಡಬೇಕು. ಇದಾದ ಮೇಲೆ ದೃಢೀಕರಣದ ಎಸ್‌ಎಂಎಸ್ ಮೊಬೈಲ್‌ಗೆ ಬರುತ್ತದೆ. ಪ್ರತಿ ಎಚ್ಚರಿಕೆಗೆ 3 ರೂಪಾಯಿಗಳ ಎಸ್‌ಎಂಎಸ್ ಶುಲ್ಕವನ್ನು ವಿಧಿಸಲಾಗುತ್ತದೆ.