ಕೋಝಿಕ್ಕೋಡ್: ರಾಜ್ಯದಲ್ಲಿ ಮತ್ತೆ ಶಿಗೆಲ್ಲ ದೃಢಪಟ್ಟಿದೆ. ಏಳು ವರ್ಷದ ಮಗುವಿಗೆ ರೋಗ ಇರುವುದು ಪತ್ತೆಯಾಗಿದೆ. ಮಗುವನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಶೀಗೆಲ್ಲ ಕೊನೆಯದಾಗಿ ಕಾಸರಗೋಡಿನಲ್ಲಿ ಇರುವುದು ದೃಢಪಟ್ಟಿತ್ತು. ಚೆರುವತ್ತೂರಿನಲ್ಲಿ ಶವರ್ಮಾ ಸೇವಿಸಿ ವಿಷಾಹಾರಗೊಂಡ ಬಾಲಕಿಯ ದೇಹದಲ್ಲಿ ಶಿಗೆಲ್ಲ ಬ್ಯಾಕ್ಟೀರಿಯಾ ಇರುವುದು ದೃಢಪಟ್ಟಿತ್ತು. ಫುಡ್ ಪಾಯ್ಸನ್ ಗೆ ಶಿಗೆಲ್ಲಾ ಕಾರಣ ಎಂದು ತಿಳಿದುಬಂದಿದೆ.