ಕಾಸರಗೋಡು: ನಗರಸಭೆಯ 2022-23ನೇ ವಾರ್ಷಿಕ ಯೋಜನೆ ರೂಪೀಕರಣ ಯೋಜನೆಯ ಭಾಗವಾಗಿರುವ ಅಭಿವೃದ್ಧಿ ವಿಚಾರ ಸಂಕಿರಣ ಮೇ 4ರಂದು ಬೆಳಗ್ಗೆ 11ಕ್ಕೆ ಮಹಾನಗರ ಸಭಾಂಗಣದಲ್ಲಿ ಜರುಗಲಿದೆ.
ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸುವರು. ನಗರಸಭಾ ಅಧ್ಯಕ್ಷ ವಕೀಲ ವಿ.ಎಂ ಮುನೀರ್ ಅಧ್ಯಕ್ಷತೆ ವಹಿಸುವರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ ವರದಿ ಮಂಡಿಸುವರು. ವಿವಿಧ ವಲಯಗಳ ಬಗ್ಗೆ ಸಮೂಹ ಚರ್ಚೆ, ವರದಿ ಕ್ರೋಢೀಕರಣ ನಡೆಯಲಿರುವುದು.