ಪೆರ್ಲ : "ಮಕ್ಕಳು ಭೀತಿ ಮುಕ್ತರಾಗಿ ಜ್ಞಾನರ್ಜನೆಗೈಯ್ಯುವ ಪೂರಕ ವಾತಾವರಣ ರೂಪಿಸಿಕೊಳ್ಳಲು ಎಲ್ಲರೂ ಸಹಕಾರಿಗಳಾಗಬೇಕು ಎಂದು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಭಿಪ್ರಾಯಪಟ್ಟರು.
ಅವರು ಶೇಣಿ ಶ್ರೀಶಾರದಾಂಬ ಎಯುಪಿ ಶಾಲೆಯಲ್ಲಿ ಬುಧವಾರ ಜರಗಿದ ಎಣ್ಮಕಜೆ ಗ್ರಾ.ಪಂ.ಮಟ್ಟದ 2022-23ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಕೋರೊನ ರೋಗ ವ್ಯಾಪಕತೆಯ ಭೀತಿಯಲ್ಲಿ ನಲುಗಿದ ಮಕ್ಕಳ ಮನಸ್ಸಿಗೆ ನೂತನ ಶೈಕ್ಷಣಿಕ ವರ್ಷ ಹರುಷ ತರಲೆಂದು ಶುಭ ಹಾರೈಸಿದರು.
ಗ್ರಾ.ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್ ಹಾಗೂ ಪಂ. ಸದಸ್ಯ, ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್,ಶಾಲಾ ಪ್ರಬಂಧಕಿ ಶಾರದ ವೈ, ಬಿಆರ್ ಸಿ ಕುಂಬಳೆಯ ಸುಮಲತಾ ಎಂ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿ.ಸೋಜ, ಮಾತೃ ಸಂಘದ ಅಧ್ಯಕ್ಷೆ ಶಶಿಪ್ರಭಾ ಮೊದಲಾದವರು ಮಾತನಾಡಿದರು.