ತಿರುವನಂತಪುರ: ಕೆಎಸ್‍ಆರ್‍ಟಿಸಿ ನೌಕರನ ವಿರುದ್ಧ ಸುಳ್ಳು ಸಂದೇಶ ಹಬ್ಬಿಸಿದ್ದಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. ಅಂಗಮಾಲಿ ಡಿಪೆÇೀ ಚಾಲಕ ಎಂ.ವಿ.ರತೀಶ್ ಅವರನ್ನು ಅಮಾನತು ಮಾಡಲಾಗಿದೆ. ಸಂಯುಕ್ತ ಸಮರಸಮಿತಿ ಯೂನಿಯನ್ ಹೆಸರಿನಲ್ಲಿ ಕೆಎಸ್ ಆರ್ ಟಿಸಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ ಎಂಬ ಸಂದೇಶ ಹಬ್ಬಿಸಿದ್ದಕ್ಕೆ ಅಮಾನತು ಮಾಡಲಾಗಿದೆ.
ಮೇ 13ರಿಂದ ಕೆಎಸ್‍ಆರ್‍ಟಿಸಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೋಟಿಸ್‍ಗಳು ಹರಿದಾಡಿದ್ದವು.
ಇದರ ಬೆನ್ನಲ್ಲೇ ಕೆಎಸ್‍ಆರ್‍ಟಿಸಿ ವಿಜಿಲೆನ್ಸ್‍ಗೆ ತನಿಖೆಗೆ ಸೂಚಿಸಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ರತೀಶ್ ಎಂಬಾತನೇ ಸಂದೇಶ ರವಾನಿಸಿರುವುದು ಎಂಬುದು ಪತ್ತೆಯಾಗಿದ್ದು, ರತೀಶ್ ತಪೆÇ್ಪಪ್ಪಿಕೊಂಡ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.