ಪೆರ್ಲ: ಗ್ರಂಥಾಲಯಗಳು ನಾಡಿನ ಅರಿವಿನ ಕೇಂದ್ರ. ಸುಸಂಸ್ಕøತಿ ಬೆಳೆಸುವ ಉದ್ದೇಶ ಈಡೇರಲಿ ಎಂದು ಹಿರಿಯ ಸಾಹಿತಿ ಹರೀಶ್ ಪೆರ್ಲ ಹೇಳಿದರು.
ಅವರು ಅಕ್ಷಯ ಸಾರ್ವಜನಿಕ ಗ್ರಂಥಾಲಯ ಬಿರ್ಮೂಲೆ ನಲ್ಕದಲ್ಲಿ ಪುಸ್ತಕ ಅರಿವು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಿರಂತರ ಕಾರ್ಯಕ್ರಮ ಮುಂದುವರಿಯಲಿ ಎಂದು ಅವರು ಹಾರೈಸಿದರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಸುಧಾಕರ್ ಮಾಸ್ತರ್ ತಮ್ಮ ಪೂರ್ವ ರಂಗಚಟುವಟಿಕೆಗಳನ್ನು ನೆನಪಿಸಿದರು. ರಂಗಕರ್ಮಿ ಶಿಕ್ಷಕ ಉದಯ ಸಾರಂಗ ಅವರ 'ದಲಿಯನ ಡೋಲು 'ಪುಸ್ತಕದ ವಿಮರ್ಶೆಯನ್ನು ಬರಹಗಾರ್ತಿ ಅಕ್ಷತಾರಾಜ್ ಪೆರ್ಲ ನಡೆಸಿಕೊಟ್ಟರು. ಜಾಗತೀಕರಣ, ನಗರೀಕರಣದ ಹೊಸ ಆಮಿಷಗಳು ಹಳ್ಳಿ ಸಂಸ್ಕೃತಿ ನಾಶಕ್ಕೆ ಕಾರಣವಾದ ಅಂಶಗಳ ಮಾರ್ಮಿಕ ಚಿತ್ರಣ ನಾಟಕದಲ್ಲಿ ಮೂಡಿ ಬಂದ ಬಗೆ ತೆರೆದಿಟ್ಟರು. ವಿಷರಹಿತ ಆಹಾರ, ಪರಿಸರ ರಕ್ಷಣೆ ಬಗೆಗಿನ ಸಂದೇಶ ನಾಟಕದಲ್ಲಿ ಪ್ರಸ್ತಾವಿಸಿದ ರೀತಿಯನ್ನು ಪರಿಚಯಮಾಡಿಕೊಟ್ಟರು. ಸಾಹಿತ್ಯ ಗೋಷ್ಠಿ,ರಂಗಚಟುವಟಿಕೆ ಹಳ್ಳಿ ಹಳ್ಳಿಗಳಲ್ಲಿ ನಡೆಯಲು ಗ್ರಂಥಾಲಯ ಪ್ರೋತ್ಸಾಹ ನೀಡಬೇಕೆಂದು ಅಶಿಸಿದರು. ಉದಯ ಸಾರಂಗ ಅವರು ಕೃತಿ ಹೊರಬಂದ ಹಂತಗಳನ್ನು ವಿವರಿಸಿದರು. ಪರಿಸರದ ವಿಚಾರಗಳಿಗೆ ರಂಗಭೂಮಿ ಸ್ಪಂದಿಸುವ ರೀತಿ ಪ್ರಸ್ತುತಪಡಿಸಿದರು. ಅವರನ್ನು ಗ್ರಂಥಾಲಯ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಿಕ್ಷಕ ಶ್ರೀಧರ ಭಟ್ ಮಾತನಾಡಿ ಕಲೆ, ಸಾಹಿತ್ಯ, ರಂಗಭೂಮಿ ಕ್ರಿಯೆ ಗಳು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗಬಲ್ಲುದು ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಸಾಹಿತಿ ಟಿ. ಎ. ಎನ್, ಖಂಡಿಗೆ ಅವರು ಕೊಡಮಾಡಿದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಹಸ್ತಾಂತರಿಸಲಾಯಿತು. ಗ್ರಂಥಾಲಯ ಅಧ್ಯಕ್ಷೆ ಪದ್ಮಲತಾ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರ ಸಹಕಾರದಿಂದ ಗ್ರಂಥಾಲಯ ಅಭಿವೃದ್ಧಿ ಆಗಲಿ ಎಂದು ಆಶಿಸಿದರು. ಕಾರ್ಯದರ್ಶಿ ಈಶ್ವರ ಕುಲಾಲ್ ಸ್ವಾಗತಿಸಿ, ಗ್ರಂಥಪಾಲಕಿ ಹರ್ಷಿತಾ ವಂದಿಸಿದರು. ಯುವಕಮಂಡಲ ಕಾರ್ಯದರ್ಶಿ ಸದಾನಂದ ಬಿರ್ಮೂಲೆ ಕಾರ್ಯಕ್ರಮ ನಿರೂಪಣೆಗೈದರು.